ಬಾಗಲಕೋಟೆ: ನಾಯಿಗಳ ದಾಳಿಗೆ ಪ್ರಾಣಬಿಟ್ಟ 2 ಆಡು, ಮೇಕೆ; ದಾಳಿಯ ವಿಡಿಯೋ ವೈರಲ್

| Updated By: ಆಯೇಷಾ ಬಾನು

Updated on: Oct 08, 2023 | 9:49 AM

ಸುಲ್ತಾನ್ ಮನಿಯಾರ ಎನ್ನುವವರಿಗೆ ಸೇರಿದ್ದ ಆಡುಗಳನ್ನು ನಾಯಿಗಳು ಕೊಂದು ಹಾಕಿವೆ. ಸುಲ್ತಾನ್ ಅವರು 24 ಸಾವಿರ ರೂ. ಕೊಟ್ಟು ಆಡು ಖರೀದಿ ಮಾಡಿ ತಂದಿದ್ದರು. ಒಂದು ದೇವರಿಗೆ, ಎರಡು ಸಾಕಲು ತಂದಿದ್ದರು. ಮನೆಯ ಹೊರಗಡೆ ಓಪನ್ ಶೆಡ್ ನಲ್ಲಿ ಆಡುಗಳು ಇರುವುದನ್ನು ಗಮನಿಸಿದ ನಾಯಿಗಳು ದಾಳಿ ಮಾಡಿವೆ.

ಬಾಗಲಕೋಟೆ, ಅ.08: ಜಿಲ್ಲೆಯ ಹಳೇ ತರಕಾರಿ ಮಾರುಕಟ್ಟೆಯೊಂದರಲ್ಲಿ ಬೀದಿನಾಯಿಗಳ ಗುಂಪು ಎರಡು ಆಡು ಹಾಗೂ ಒಂದು ಗಂಡು ಮೇಕೆ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಡೆದಿದ್ದು ದಾಳಿಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊನ್ನೆ ತಡರಾತ್ರಿ ನಡೆದಿರುವ ನಾಯಿಗಳ ದಾಳಿ ವಿಡಿಯೊ ವೈರಲ್ ಆಗಿದೆ. ಸುಲ್ತಾನ್ ಮನಿಯಾರ ಎನ್ನುವವರಿಗೆ ಸೇರಿದ್ದ ಆಡುಗಳನ್ನು ನಾಯಿಗಳು ಕೊಂದು ಹಾಕಿವೆ. ಸುಲ್ತಾನ್ ಅವರು 24 ಸಾವಿರ ರೂ. ಕೊಟ್ಟು ಆಡು ಖರೀದಿ ಮಾಡಿ ತಂದಿದ್ದರು. ಒಂದು ದೇವರಿಗೆ, ಎರಡು ಸಾಕಲು ತಂದಿದ್ದರು. ಮನೆಯ ಹೊರಗಡೆ ಓಪನ್ ಶೆಡ್ ನಲ್ಲಿ ಆಡುಗಳು ಇರುವುದನ್ನು ಗಮನಿಸಿದ ನಾಯಿಗಳು ದಾಳಿ ಮಾಡಿವೆ. ನಾಲ್ಕೈದು ಬೀದಿನಾಯಿಗಳು ಒಮ್ಮೆಲೆ ಅಟ್ಯಾಕ್ ಮಾಡಿ ಒಂದು ಆಡನ್ನು ತಿಂದು ಹಾಕಿದ್ದು ಎರಡಕ್ಕೆ ಮನಬಂದಂತೆ ಕಚ್ಚಿ ಹಲ್ಲೆ ಮಾಡಿವೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ