ರಾಮನಗರ: ಕ್ರೈಸ್ತ ಸಮುದಾಯದ ಕಾರ್ಯಕ್ರಮದಲ್ಲಿ ಭಾಗಿಯಾದ DK ಬ್ರದರ್ಸ್; ಇಲ್ಲಿದೆ ವಿಡಿಯೋ

ರಾಮನಗರ: ಕ್ರೈಸ್ತ ಸಮುದಾಯದ ಕಾರ್ಯಕ್ರಮದಲ್ಲಿ ಭಾಗಿಯಾದ DK ಬ್ರದರ್ಸ್; ಇಲ್ಲಿದೆ ವಿಡಿಯೋ

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 07, 2023 | 9:20 PM

ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿರುವ ಕ್ರೈಸ್ತ ಸಮುದಾಯದ  ಹೋಲಿ ರೋಜರಿ ಚರ್ಚ್ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ‌ ಡಿಕೆ ಶಿವಕುಮಾರ್ (Dk Shivakumar) ಹಾಗೂ ಡಿಕೆ ಸುರೇಶ್ (DK Suresh)​ ಭಾಗಿಯಾಗಿದ್ದಾರೆ.

ರಾಮನಗರ, ಅ.07: ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿರುವ  ಕ್ರೈಸ್ತ ಸಮುದಾಯದ  ಹೋಲಿ ರೋಜರಿ ಚರ್ಚ್ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ‌ ಡಿಕೆ ಶಿವಕುಮಾರ್ (Dk Shivakumar) ಹಾಗೂ ಡಿಕೆ ಸುರೇಶ್ (DK Suresh)​ ಭಾಗಿಯಾಗಿದ್ದಾರೆ. 1947 ರಲ್ಲಿ ಕಟ್ಟಲಾಗಿದ್ದ ಸರ್ಕಲ್‌ ಮಾತೆಯ ಪ್ರತಿಮೆ ಇದಾಗಿದ್ದು, ಸರ್ಕಲ್ ಮಾತೆಯ ವಜ್ರ ಮಹೋತ್ಸವ ಅಂಗವಾಗಿ ಕಾರ್ಯಕ್ರಮ ನಡೆಯುತ್ತಿದೆ. ಈ ವೇಳೆ ಆಗಮಿಸಿದ ಡಿಕೆ ಸಹೋದರರು, ಸರ್ಕಲ್ ಮಾತೆ ಪ್ರತಿಮೆಗೆ ಹೂವಿನ ಹಾರ ಹಾಕಿ, ಗೌರವ ಸಲ್ಲಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ