ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದ ಒಂದೇ ಕುಟುಂಬದ 7 ಜನರು ಹಿಂದು ಧರ್ಮಕ್ಕೆ ಘರ್ ವಾಪಸ್ಸಿ
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 7 ಜನ ಹಿಂದು ಧರ್ಮಕ್ಕೆ ಘರ್ ವಾಪಸ್ಸಿ ಆಗಿರುವಂತಹ ಘಟನೆ ತಾಲೂಕಿನ ಸೈದಾಪುರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಯಾದಗಿರಿ: ಕ್ರೈಸ್ತ ಧರ್ಮಕ್ಕೆ ಮತಾಂತರ (converte) ಗೊಂಡಿದ್ದ 7 ಜನ ಹಿಂದು (Hinduism) ಧರ್ಮಕ್ಕೆ ಘರ್ ವಾಪಸ್ಸಿ ಆಗಿರುವಂತಹ ಘಟನೆ ತಾಲೂಕಿನ ಸೈದಾಪುರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ. ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಕ್ರೈಸ್ತ ಕುಟುಂಬವನ್ನು ಮಾತೃ ಧರ್ಮಕ್ಕೆ ಘರ್ ವಾಪಸ್ಸಿ ಮಾಡಲಾಗಿದೆ. ಘರ್ ವಾಪಸ್ಸಿ ಆದವರಿಗೆ ವಿ.ಹೆಚ್.ಪಿ ಮುಖಂಡರು ಹಣೆಗೆ ವಿಭೂತಿ ಹಾಗೂ ಕುಂಕುಮ ಹಚ್ಚಿ ಹಿಂದು ಧರ್ಮಕ್ಕೆ ಸ್ವಾಗತಿಸಿದರು. ಹಿಂದು ಧರ್ಮದ ಸಂಸ್ಕೃತಿಯೊಂದಿಗೆ ಮರಳಿ ಮಾತೃ ಧರ್ಮಕ್ಕೆ ವಾಪಸ್ ಆಗಿದ್ದಾರೆ. 2019 ರಲ್ಲಿ ಒಂದೆ ಕುಟುಂಬದ 7 ಜನರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದರು. ಸೀನು, ಸಾವಿತ್ರಮ್ಮ, ರೇಷಮ್ಮ, ಗಂಗಪ್ಪ, ಮಾರೆಮ್ಮ, ರಾಮಸ್ವಾಮಿ ಹಾಗೂ ಸರೋಜಮ್ಮ ಹಿಂದು ಧರ್ಮಕ್ಕೆ ಮರಳಿದವರು.
ಒಂದೆ ಕುಟುಂಬದ 7 ಜನರು ಕ್ರೈಸ್ತ ಧರ್ಮಕ್ಕೆ ಮತಾಂತರ
ಘರ್ ವಾಪಸ್ ಆದ 7 ಜನರು ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಲಸತ್ತಿ ಗ್ರಾಮದವರು ಎನ್ನಲಾಗುತ್ತಿದೆ. ಬುಡಗ ಜಂಗಮ ಸಮುದಾಯದ ಮುಖಂಡರ ಮನವೋಲಿಕೆಯಿಂದ ಮಾತೃಧರ್ಮಕ್ಕೆ ವಾಪಸ್ ಆಗಿದ್ದಾರೆ. ಮತಾಂತರವಾಗಿದ್ದ ಕುಟುಂಬ ಬುಡಗ ಜಂಗಮ ಸಮೂದಾಯಕ್ಕೆ ಸೇರಿದ ಕುಟುಂಬವಾಗಿದೆ. ನಾವು ಮೂಲತಃ ಹಿಂದು ಧರ್ಮದವರು. 3-4 ವರ್ಷದ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ವಿ. ಪ್ರತಿ ರವಿವಾರ ಚರ್ಚ್ಗೆ ಬರಬೇಕು ಎಂದು ಹೇಳಿದ್ರು ಎಂದು ಮತಾಂತರಕ್ಕೆ ಒಳಗಾದ ಬಗ್ಗೆ ಹೇಳಿದರು. ಈಗ ನಮಗೆ ಮತ್ತೆ ವಾಪಸ್ ಮಾತೃ ಧರ್ಮಕ್ಕೆ ಬಂದಿರುವುದು ಸಂತೋಷವಾಗಿದೆ ಎಂದು ಸೀನು ಹೇಳಿದರು.
ಇದನ್ನೂ ಓದಿ: ಯಾದಗಿರಿ: ಜಿಲ್ಲಾಸ್ಪತ್ರೆಯಲ್ಲೊಂದು ಅಮಾನುಷ ಘಟನೆ: ವೈದ್ಯರ ನಿರ್ಲಕ್ಷ್ಯದಿಂದ ಕಾರಿಡಾರ್ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
ಹಿಂದು ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ ನೂರಾರು ಜನ
ಇತ್ತೀಚೆಗೆ ಇದೇ ಜಿಲ್ಲೆಯಲ್ಲಿ ಹಿಂದು ಧರ್ಮ ತ್ಯಜಿಸಿ ದಲಿತ ಸಮುದಾಯದ ನೂರಾರು ಜನ ಬೌದ್ಧ ಧರ್ಮ ಸ್ವೀಕರ ಮಾಡಿರುವಂತಹ ಘಟನೆ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿತ್ತು. ಬಿ.ಆರ್.ಅಂಬೇಡ್ಕರ್ ಮೊಮ್ಮಗಳಾದ ರಮಾಬಾಯಿ ನೇತೃತ್ವದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಕಾರ್ಯಕ್ರಮ ನಡೆದಿತ್ತು. ನೂರಾರು ಜನರಿಗೆ ವರಜ್ಯೋತಿ ಬಂತೆಜೀ ಸಾನಿಧ್ಯದಲ್ಲಿ ಬೌದ್ಧ ಧಮ್ಮ ದೀಕ್ಷೆ ನೀಡಲಾಯಿತು. ಹಿಂದು ಧರ್ಮದಲ್ಲಿ ಕೀಳಾಗಿ ಕಾಣುತ್ತಿರುವ ಹಿನ್ನಲೆ ದೀಕ್ಷೆ ಪಡೆಯಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬೌದ್ಧ ಧರ್ಮಕ್ಕೆ ಸೇರಲು ಮುಂದಾದ ಹಲವರು: ಹಿಂದೂ ದೇವರ ಫೋಟೋಗಳು ಕೃಷ್ಣಾ ನದಿ ಪಾಲು
ತ್ರಿಸರಣ ಪಂಚಶೀಲ, ಅಷ್ಟಾಂಗ ಮಾರ್ಗ ಮತ್ತು ಅಂಬೇಡ್ಕರ್ ಪ್ರತಿಪಾಧಿಸಿದ 22 ಪ್ರತಿಜ್ಞಾ ವಿಧಿಗಳನ್ನ ಬೋಧಿಸಲಾಯಿತು. ಪ್ರತಿಜ್ಞಾ ವಿಧಿ ಪಡೆದು ಹಿಂದೂ ಧರ್ಮಕ್ಕೆ ವಿದಾಯ ಹೇಳಿ ಬೌದ್ಧ ಧರ್ಮ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಬಹುತೇಕರು ಬೌದ್ಧ ಧರ್ಮ ಸ್ವೀಕರ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:47 pm, Thu, 12 January 23