AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಲ್ಲದ ಕಬ್ಬು ಬೆಳೆಗಾರರ ಕಿಚ್ಚು: ಸರ್ಕಾರದ ಆದೇಶ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ

ನಿಲ್ಲದ ಕಬ್ಬು ಬೆಳೆಗಾರರ ಕಿಚ್ಚು: ಸರ್ಕಾರದ ಆದೇಶ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ

ರವಿ ಹೆಚ್ ಮೂಕಿ, ಕಲಘಟಗಿ
| Updated By: ರಮೇಶ್ ಬಿ. ಜವಳಗೇರಾ|

Updated on: Nov 11, 2025 | 8:07 PM

Share

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿ ಟನ್ ಕಬ್ಬಿಗೆ 3500 ನಿಗದಿ ಮಾಡುವಂತೆ ಒತ್ತಾಯಿ ಬೆಳಗಾವಿಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿತ್ತು. ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ಮೇಲೆ ಸಭೆ ಮಾಡಿ ಫಿಪ್ಟಿ ಫಿಪ್ಟಿ ತೀರ್ಮಾನ ಕೈಗೊಂಡಿದ್ದರು. ಅದಂತೆ ಸರ್ಕಾರದಿಂದ 50 ರೂ. ಹಾಗೂ ಕಾರ್ಖಾನೆಯಿಂದ 50 ರೂ. ಒಟ್ಟು 3300 ರೂ ನೀಡಲು ಸರ್ಕಾರ ತೀರ್ಮಾನಿಸಿದ್ದು, ಈ ಸಂಬಂಧ ಅಧಿಕೃತ ಆದೇಶ ಸಹ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ರೈತರು ಸಂಭ್ರಮಾಚರಣೆ ಮಾಡಿ ಪ್ರತಿಭಟನೆ ಅಂತ್ಯಗೊಳಿಸಿದ್ದರು. ಆದ್ರೆ, ಬಾಗಲಕೋಟೆಯಲ್ಲಿ ಮಾತ್ರ ಕಬ್ಬು ಬೆಳೆಗಾರರ ಪ್ರತಿಭಟನೆ ನಿಲ್ಲುತ್ತಿಲ್ಲ. ಕಬ್ಬಿಗೆ ದರ ನಿಗದಿ ಸಂಬಂಧ ರಾಜ್ಯ ಸರ್ಕಾರದ ಆದೇಶವನ್ನು ತಿರಸ್ಕರಿಸಿದ್ದು, ಆದೇಶ ಪ್ರತಿಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದ್ದಾರೆ.

ಬಾಗಲಕೋಟೆ, (ನವೆಂಬರ್ 11): ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿ ಟನ್ ಕಬ್ಬಿಗೆ 3500 ನಿಗದಿ ಮಾಡುವಂತೆ ಒತ್ತಾಯಿ ಬೆಳಗಾವಿಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿತ್ತು. ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ಮೇಲೆ ಸಭೆ ಮಾಡಿ ಫಿಪ್ಟಿ ಫಿಪ್ಟಿ ತೀರ್ಮಾನ ಕೈಗೊಂಡಿದ್ದರು. ಅದಂತೆ ಸರ್ಕಾರದಿಂದ 50 ರೂ. ಹಾಗೂ ಕಾರ್ಖಾನೆಯಿಂದ 50 ರೂ. ಒಟ್ಟು 3300 ರೂ ನೀಡಲು ಸರ್ಕಾರ ತೀರ್ಮಾನಿಸಿದ್ದು, ಈ ಸಂಬಂಧ ಅಧಿಕೃತ ಆದೇಶ ಸಹ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ರೈತರು ಸಂಭ್ರಮಾಚರಣೆ ಮಾಡಿ ಪ್ರತಿಭಟನೆ ಅಂತ್ಯಗೊಳಿಸಿದ್ದರು. ಆದ್ರೆ, ಬಾಗಲಕೋಟೆಯಲ್ಲಿ ಮಾತ್ರ ಕಬ್ಬು ಬೆಳೆಗಾರರ ಪ್ರತಿಭಟನೆ ನಿಲ್ಲುತ್ತಿಲ್ಲ. ಕಬ್ಬಿಗೆ ದರ ನಿಗದಿ ಸಂಬಂಧ ರಾಜ್ಯ ಸರ್ಕಾರದ ಆದೇಶವನ್ನು ತಿರಸ್ಕರಿಸಿದ್ದು, ಆದೇಶ ಪ್ರತಿಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ , ಕಬ್ಬಿಗೆ ಸೂಕ್ತ ದರ ನಿಗದಿಗೆ ಆಗ್ರಹಿಸಿ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ. ಸಕ್ಕರೆ ಕಾರ್ಖಾನೆ ಮಾಲೀಕರು ಚುನಾವಣೆಗೆ ನಿಂತರೆ ಮತ ಹಾಕಬಾರದು. ರೈತರು ಕಾರ್ಖಾನೆ ಮಾಲೀಕರಿಗೆ ಮತ ಹಾಕದಿದ್ದರೆ ಸೊಂಟ ಮುರಿಯುತ್ತೆ. ನಮಗೂ ಮಾನ ಮರ್ಯಾದೆ ಇಲ್ಲ, ಅಂಥವರಿಗೆ ವೋಟ್ ಹಾಕುತ್ತೇವೆ. ರೈತರ ಮಕ್ಕಳನ್ನು ಶಾಸನಸಭೆಗೆ ಕಳುಹಿಸಿದರೆ ನಮಗೆ ಇಂತಹ ಸ್ಥಿತಿ ಬರಲ್ಲ. ಬೆಳಗಾವಿ ಜಿಲ್ಲೆಯ ರೈತರು ಬೆಳಗಾವಿಯಲ್ಲೇ ಹೋರಾಟ ಮಾಡಬೇಕು. ಧಾರವಾಡ ಭಾಗದ ರೈತರ ಹೋರಾಟದ ದಿನಾಂಕ ಘೋಷಣೆ ಮಾಡಲಿ. ರೈತರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದರು.