ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ

Edited By:

Updated on: Mar 15, 2025 | 6:30 PM

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಆಚರಿಸುವ ಹೋಳಿ ಹಬ್ಬ ಬೇರೆಡೆಗಳಿಗಿಂತ ಭಿನ್ನವಾಗಿದೆ. ಋತುಮತಿಯಾಗದ ಬಾಲಕಿಯನ್ನು ಮೆರವಣಿಗೆ ಮಾಡುವ ಆಚರಣೆ ಇಲ್ಲಿದೆ. ಕಳೆದ ಐವತ್ತು ವರ್ಷದಿಂದ ಈ ವಿಶೇಷ ಆಚರಣೆ ನಡೆದುಕೊಂಡು ಬಂದಿದೆ. ಈ ವೇಳೆ ನಾಗಾಸಾಧುಗಳ ವೇಷದಲ್ಲಿ ಮಕ್ಕಳು ಗಮನ ಸೆಳೆದಿದ್ದಾರೆ.

ಬಾಗಲಕೋಟೆ, ಮಾರ್ಚ್​ 15: ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಕುಂಬಾರ ಓಣಿಯಲ್ಲಿ ವಿಶೇಷವಾಗಿ ಹೋಳಿ (holi) ಆಚರಣೆ ಮಾಡಲಾಗಿದೆ. ಬಣ್ಣದ ಆಟವಿಲ್ಲದೆ, ಹುಣ್ಣಿಮೆಯಂದು ಕಾಮದಹನ ಮಾತ್ರ ನಡೆಯುತ್ತದೆ. ಮರುದಿನ, ಕಾಮನ ಶವದ ಬದಲು ಋತುಮತಿಯಾಗದ ಬಾಲಕಿಯನ್ನು ಅಲಂಕರಿಸಿ ಮೆರವಣಿಗೆ ಮಾಡುವುದು ವಿಶೇಷ. ಕಳೆದ ಐವತ್ತು ವರ್ಷಗಳಿಂದ ಈ ಆಚರಣೆ ನಡೆಯುತ್ತಿದೆ. ಕುಂಭಮೇಳದಿಂದಾಗಿ ಎಲ್ಲೆಡೆ ನಾಗಾಸಾಧು ಬಗ್ಗೆ ಗೊತ್ತಾಗಿದೆ. ಹಾಗಾಗಿ ನಾಗಾಸಾಧುಗಳ ವೇಷಧಾರಿ ಮಕ್ಕಳು ಈ ಮೆರವಣಿಗೆಯಲ್ಲಿ ಭಾಗವಹಿಸಿ ಎಲ್ಲರ ಗಮನಸೆಳೆದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.