ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?

| Updated By: ಮದನ್​ ಕುಮಾರ್​

Updated on: Oct 31, 2024 | 7:54 PM

ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿರುವ ಬಘೀರ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಮತ್ತು ಶ್ರೀಮುರಳಿ ಅವರು ಜೋಡಿಯಾಗಿ ನಟಿಸಿದ್ದಾರೆ. ‘ಟಿವಿ 9’ ಜೊತೆಗಿನ ಸಂದರ್ಶನದಲ್ಲಿ ಅವರಿಬ್ಬರು ಲವ್​ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನಿಮಗೆ ಯಾವಾಗಲಾದ್ರೂ ಬ್ರೇಕಪ್ ಆಗಿದ್ಯಾ ಎಂದು ಕೇಳಿದ್ದಕ್ಕೆ ಅವರ ಉತ್ತರ ಏನಿತ್ತು ಅಂತ ಈ ವಿಡಿಯೋದಲ್ಲಿ ನೋಡಿ..

‘ಬಘೀರ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಸಂದರ್ಶನದಲ್ಲಿ ಅವರಿಗೆ ಲವ್ ಬ್ರೇಕಪ್ ಬಗ್ಗೆ ಕೇಳಲಾಯಿತು. ಅದಕ್ಕೆ ರುಕ್ಮಿಣಿ ಅವರು ನೇರವಾಗಿ ‘ನೋ’ ಎಂದಿದ್ದಾರೆ. ಚಿತ್ರರಂಗದಲ್ಲಿ ತಮ್ಮ ಬಗ್ಗೆ ಜಾಸ್ತಿ ಯಾವುದೇ ಗಾಸಿಪ್ ಕೂಡ ಇಲ್ಲ ಎಂದು ಅವರು ಹೇಳಿದ್ದಾರೆ. ಸದ್ಯ ಅವರೀಗ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on