ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ

| Updated By: ವಿವೇಕ ಬಿರಾದಾರ

Updated on: Jun 16, 2024 | 3:02 PM

ಬಳ್ಳಾರಿ ತಾಲೂಕಿನ ಹಗರಿಗ್ರಾಮದ ನಿವಾಸಿಗಳಾದ ಸುಧಾಕರ ಮತ್ತು ಸಿಂಧು ದಂಪತಿಯ ನಾಲ್ಕು ತಿಂಗಳ ಮಗು ಸಾಯಿರಾ ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರ್ಪಡೆಯಾಗಿದ್ದಾಳೆ. 149 ಫ್ಲಾಶ್ ಕಾರ್ಡ್ಸ್ ಗುರುತಿಸುವ ಮೂಲಕ ಮಗು ಸಾಯಿರಾ ಈ ಸಾಧನೆ ಮಾಡಿದ್ದಾಳೆ.

ಬಳ್ಳಾರಿ, ಜೂನ್​​ 16: ಬಳ್ಳಾರಿ (Ballari) ತಾಲೂಕಿನ ಹಗರಿಗ್ರಾಮದ ನಿವಾಸಿಗಳಾದ ಸುಧಾಕರ ಮತ್ತು ಸಿಂಧು ದಂಪತಿಯ ನಾಲ್ಕು ತಿಂಗಳ ಮಗು ಸಾಯಿರಾ ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ (Noble Book of Records) ಸೇರ್ಪಡೆಯಾಗಿದ್ದಾಳೆ. ರಾಷ್ಟ್ರ ದ್ವಜಗಳು, ಹಣ್ಣಿನ ಚಿತ್ರ, ಪ್ರಾಣಿಗಳ ಚಿತ್ರ, ಪಕ್ಷಿಗಳು ಇತರೆ ವಸ್ತುಗಳ ಚಿತ್ರವಿರುವ 149 ಫ್ಲಾಶ್ ಕಾರ್ಡ್ಸ್ ಗುರುತಿಸುವ ಮೂಲಕ ಮಗು ಸಾಯಿರಾ ಈ ಸಾಧನೆ ಮಾಡಿದ್ದಾಳೆ. ಮಗುವಿನ ಸಾಧನೆಗೆ ಪೋಷಕರು ಪುಲ್ ಖುಷ್ ಆಗಿದ್ದಾರೆ. ಸಾಯಿರಾ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ಆಂಧ್ರಪ್ರದೇಶ ಅನಂತಪೂರ ಜಿಲ್ಲೆಯ ಜಿಲ್ಲಾಧಿಕಾರಿ ವಿನೋದ ಕುಮಾರ್​ ಅವರು ಮಗು ಸಾಯಿರಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ನೋಬಲ್ ಬುಕ್ ಆಫ್ ರೆಕಾರ್ಡ್ಸ್ ಸರ್ಟಿಫಿಕೇಟ್​ ನೀಡಿ ಸನ್ಮಾನಿಸಿದರು. ಸಾಯಿರಾ ತಾಯಿ ಸಿಂಧು ಅವರ ತಾಳ್ಮೆಗೆ ಜಿಲ್ಲಾಧಿಕಾರಿ ವಿನೋದ ಕುಮಾರ್ ಹುಬ್ಬೇರಿಸಿದರು. ಮಗು ಸಾಯಿರಾ ಸಾಧನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ನೋಡಿ: ನರವ್ಯೂಹವನ್ನು ಬಲಪಡಿಸುವ ಪಾದಹಸ್ತಾಸನ ಮಾಡುವುದು ಹೇಗೆ? ಮೋದಿ ವಿಡಿಯೋ ಇಲ್ಲಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:00 pm, Sun, 16 June 24

Follow us on