ಬಂಡೀಪುರ: ಸೆಲ್ಫೀಗೆ ಮುಂದಾದವನ ಅಟ್ಟಾಡಿಸಿ ಮೆಟ್ಟಿದ ಕಾಡಾನೆ, ಆಮೇಲೇನಾಯ್ತು? ವಿಡಿಯೋ ನೋಡಿ
ಬಂಡೀಪುರದಲ್ಲಿ ವಾಹನದಿಂದ ಇಳಿಯಬಾರದು ಎಂಬ ನಿಯಮ ಇದೆ. ಕಾಡಾನೆಗಳು ಹಾಗೂ ವನ್ಯ ಪ್ರಾಣಿಗಳು ಸಂಚರಿಸುವ ಸ್ಥಳ ಆಗಿರುವುದರಿಂದ ಪ್ರಯಾಣಿಕರು, ಪ್ರವಾಸಿಗರು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ, ಪ್ರಯಾಣಿಕನೊಬ್ಬ ಕಾಡಾನೆ ಜತೆ ಸೆಲ್ಫಿ ಕ್ಲಿಕ್ಕಿಸಲು ಹುಚ್ಚಾಟ ಮೆರೆದು ಗಾಯಗೊಂಡ ಘಟನೆ ಸಂಭವಿಸಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋ ಇಲ್ಲಿದೆ.
ಚಾಮರಾಜನಗರ, ಆಗಸ್ಟ್ 11: ಬಂಡೀಪುರ ರಸ್ತೆಯಲ್ಲಿ ಕೇರಳ ಮೂಲದ ಪ್ರವಾಸಿಗನೊಬ್ಬ ಹುಚ್ಚಾಟ ಮೆರೆದಿದ್ದಾನೆ. ಬಂಡೀಪುರ – ಕೆಕ್ಕನಹಳ್ಳ ಚೆಕ್‌ಪೋಸ್ಟ್ ನಡುವಿನ ಕಾಡಿನ ರಸ್ತೆಯಲ್ಲಿ ಪ್ರಯಾಣಿಕನೊಬ್ಬ ಕಾಡಾನೆ ಜತೆ ಸೆಲ್ಫಿ ಕ್ಲಿಕ್ ಮಾಡಿಕೊಳ್ಳಲು ವಾಹನದಿಂದ ಇಳಿದಿದ್ದಾನೆ. ಈ ವೇಳೆ, ರೊಚ್ಚಿಗೆದ್ದ ಕಾಡಾನೆ ಆತನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಓಡುತ್ತಿದ್ದಾಗ ಎಡವಿ ಬಿದ್ದ ಪ್ರಯಾಣಿಕನನ್ನು ಕಾಡಾನೆ ತುಳಿದಿದೆ. ಅದೃಷ್ಟವಶಾತ್, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.