ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷದ ಆಚರಣೆಗೆ ಬೆಂಗಳೂರು ಸಜ್ಜಾಗಿದೆ. ಎಂಜಿ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲದಲ್ಲಿ ಕಿಕ್ಕಿರಿದು ಜನರು ಸೇರಿದ್ದಾರೆ. ಕೋರಮಂಗಲದ ಪಬ್ ಮತ್ತು ಬಾರ್‌ಗಳಲ್ಲೂ ಜನಸಾಗರ ತುಂಬಿತುಳುಕುತ್ತಿದ್ದಾರೆ. ಯುವಕ ಯುವತಿಯರು ರಸ್ತೆಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಫುಟ್ಪಾತ್ನ ಒಂದು ಭಾಗದಿಂದ ಮಾತ್ರ ಜನರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷಾಚರಣೆಗೆ (New Year) ಕೇವಲ ಒಂದೇ ಗಂಟೆ ಬಾಕಿ ಇದೆ. ಹೀಗಿರುವಾಗ ಎಂಜಿ ರೋಡ್, ಚರ್ಚ್ ಸ್ಟ್ರೀಟ್ನಲ್ಲಿ ಕಿಕ್ಕಿರಿದು ಜನರು ತುಂಬಿದ್ದಾರೆ. ಜೊತೆಗೆ ಕೋರಮಂಗಲದ ರಸ್ತೆಯ ಮೂರು ಭಾಗಗಳಲ್ಲಿ ಕೂಡ ಸಾಕಷ್ಟು ಜನರು ಸೇರಿದ್ದಾರೆ. ಫುಟ್ಪಾತ್ನ ಒಂದು ಭಾಗದಿಂದ ಮಾತ್ರ ಜನರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈಗಾಗಲೇ ಪೊಲೀಸರು ಚರ್ಚ್ ಸ್ಟ್ರೀಟ್ ರಸ್ತೆ ಬಂದ್ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 31, 2024 11:32 PM