AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ರಜೆಯಲ್ಲಿ ಶಾರ್ದೂಲ ವೇಷ ಧರಿಸಿ ಸ್ನೇಹಿತನ ಚಿಕಿತ್ಸೆಗೆ ಹಣ ಸಂಗ್ರಹಿಸಿದ ಮಕ್ಕಳು: ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ

ದಸರಾ ರಜೆಯಲ್ಲಿ ಶಾರ್ದೂಲ ವೇಷ ಧರಿಸಿ ಸ್ನೇಹಿತನ ಚಿಕಿತ್ಸೆಗೆ ಹಣ ಸಂಗ್ರಹಿಸಿದ ಮಕ್ಕಳು: ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ

ಅಕ್ಷಯ್​ ಪಲ್ಲಮಜಲು​​
|

Updated on: Oct 19, 2026 | 3:58 PM

Share

ಬಂಟ್ವಾಳದ ಸಜಿಪ ಪಡುವಿನ ಮಕ್ಕಳು ದಸರಾ ರಜೆಯಲ್ಲಿ ವೇಷಭೂಷಣ ಧರಿಸಿ ಸಂಗ್ರಹಿಸಿದ 5,000 ರೂ.ಗಳನ್ನು ತಮ್ಮ ಖರ್ಚಿಗೆ ಬಳಸದೆ ಮಾನವೀಯತೆ ಮೆರೆದಿದ್ದಾರೆ. ರಸ್ತೆ ಅಪಘಾತಕ್ಕೀಡಾಗಿ ಸಂಕಷ್ಟದಲ್ಲಿರುವ ಶಶಿಕಾಂತ್‌ಗೆ ಚಿಕಿತ್ಸೆಗಾಗಿ ಆ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಮಕ್ಕಳ ನಿಸ್ವಾರ್ಥ ಸೇವೆಯನ್ನು ಕರಾವಳಿ ಜನತೆ ಶ್ಲಾಘಿಸಿದ್ದಾರೆ.

ಬಂಟ್ವಾಳ, ಅ.19 : ದಸರಾ ರಜೆ ಎಂದರೆ ಮಕ್ಕಳಿಗೆ ಸಂಭ್ರಮ, ರಜೆ ಸಿಕ್ಕರೇ ಸಾಕು ಊರೆಲ್ಲ ಸುತ್ತ ಬೇಕು ಎಂಬ ಆಸೆ ಆದರೆ ಈ ಮಕ್ಕಳು ಹಬ್ಬದ ಸಂಭ್ರಮದಲ್ಲಿ ವೇಷ ತೊಟ್ಟು ಕುಣಿದು ಗಳಿಸಿದ ಹಣವನ್ನು ಸ್ವಂತ ಖರ್ಚಿಗೆ ಬಳಸಿಕೊಳ್ಳದೆ, ಅಪಘಾತಕ್ಕೊಳಗಾಗಿ ಸಂಕಷ್ಟದಲ್ಲಿರುವ ಜೀವಕ್ಕೆ ನೆರವಾಗಿದ್ದಾರೆ ಸಜಿಪ ಪಡುವಿನ ಮುಗ್ಧ ಕಂದಮ್ಮಗಳು ಮಾನವೀಯತೆ ಮೆರೆದಿದ್ದಾರೆ. ಹಬ್ಬದ ವೇಳೆಯಲ್ಲಿ ಶಾರ್ದೂಲ ಹಾಗೂ ನಾನಾ ವೇಷಭೂಷಣಗಳನ್ನು ಧರಿಸಿ ಊರೂರು ಸುತ್ತಿ ಸಂಗ್ರಹಿಸಿದ ಸುಮಾರು 5,000 ರೂ. ಹಣವನ್ನು ರಸ್ತೆ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಾಂತ್ ಅವರಿಗೆ ಹಸ್ತಾಂತರಿಸಿ ನೆರವಿನ ಹಸ್ತ ಚಾಚಿದ್ದಾರೆ. ಹಬ್ಬದ ಸಂಭ್ರಮದ ಸಂದರ್ಭದಲ್ಲಿ ನಾನಾ ವೇಷಗಳನ್ನು ತೊಟ್ಟು, ಮನೆಮನೆಗೆ ಹಾಗೂ ಊರೂರು ಸುತ್ತಿ ಈ ಪುಟ್ಟ ಮಕ್ಕಳು ಪ್ರೀತಿಯಿಂದ ಸಂಭಾವನೆ ಸಂಗ್ರಹಿಸಿದ್ದರು. ಇತ್ತೀಚೆಗೆ ಭೀಕರ ರಸ್ತೆ ಅಪಘಾತಕ್ಕೀಡಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಾಂತ್ ಅವರ ಕಷ್ಟಕ್ಕೆ ಸ್ಪಂದಿಸಿದ ಮಕ್ಕಳು, ತಾವು ಸಂಗ್ರಹಿಸಿದ ಸಂಪೂರ್ಣ ಮೊತ್ತ 5,000 ರೂ. ಅನ್ನು ಶಶಿಕಾಂತ್ ಅವರ ಮನೆಗೆ ತೆರಳಿ ಹಸ್ತಾಂತರಿಸಿದ್ದಾರೆ. ತಮ್ಮ ಖುಷಿಗಾಗಿ ಅಥವಾ ಮೋಜಿಗಾಗಿ ಆ ಹಣವನ್ನು ಖರ್ಚು ಮಾಡದೆ, ಕಷ್ಟದಲ್ಲಿರುವ ಜೀವಕ್ಕೆ ಆಸರೆಯಾದ ಈ ಮಕ್ಕಳ ನಿಸ್ಪೃಹ ಸೇವೆ ಹಾಗೂ ವಿಶಾಲ ಹೃದಯಕ್ಕೆ ಕರಾವಳಿ ಜನತೆ ಮತ್ತು ನೆಟ್ಟಿಗರು ‘ಸಲಾಂ’ ಹೊಡೆದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More