ಯತ್ನಾಳ್​ ಘರ್​ ವಾಪಸ್ಸೀ ಚರ್ಚೆ: ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಹಿಂದೂ ಹುಲಿ

Updated on: Dec 12, 2025 | 4:30 PM

ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶಗೊಂಡಿದ್ದರು. ಅಲ್ಲದೇ ಹೋದಲ್ಲಿ ಬಂದಲ್ಲಿ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಲೇ ಇದ್ದರು. ಅಲ್ಲದೇ ಕೆಲ ಗಂಭೀರ ಆರೋಪಗಳನ್ನು ಮಾಡುತ್ತಿದ್ದರು. ಇದರಿಂದ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಆರೋಪ ಮೇಲೆ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದ್ದು, ಇದೀಗ ಅವರನ್ನ ಘರ್ ವಾಪಸ್ಸಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ ಸುವರ್ಣಸೌಧದಲ್ಲಿರುವ ವಿಪಕ್ಷ ನಾಯಕರ ಕಚೇರಿಯಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದು, ಈ ವೇಳೆ ಯತ್ನಾಳ್ ಅವರನ್ನು ವಾಪಸ್ ಪಕ್ಷಕ್ಕೆ ಕರೆತರುವ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಸ್ವತಃ ಯತ್ನಾಳ್ ಅವರೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಬೆಳಗಾವಿ, (ಡಿಸೆಂಬರ್ 12): ವಿಜಯೇಂದ್ರಗೆ (BY Vijayendra) ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangowda Patil Yatnal) ಆಕ್ರೋಶಗೊಂಡಿದ್ದರು. ಅಲ್ಲದೇ ಹೋದಲ್ಲಿ ಬಂದಲ್ಲಿ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಲೇ ಇದ್ದರು. ಅಲ್ಲದೇ ಕೆಲ ಗಂಭೀರ ಆರೋಪಗಳನ್ನು ಮಾಡುತ್ತಿದ್ದರು. ಇದರಿಂದ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಆರೋಪ ಮೇಲೆ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದ್ದು, ಇದೀಗ ಅವರನ್ನ ಘರ್ ವಾಪಸ್ಸಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ ಸುವರ್ಣಸೌಧದಲ್ಲಿರುವ ವಿಪಕ್ಷ ನಾಯಕರ ಕಚೇರಿಯಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದು, ಈ ವೇಳೆ ಯತ್ನಾಳ್ ಅವರನ್ನು ವಾಪಸ್ ಪಕ್ಷಕ್ಕೆ ಕರೆತರುವ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಸ್ವತಃ ಯತ್ನಾಳ್ ಅವರೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ಮಾತನಾಡಿರುವ ಯತ್ನಾಳ್, ಬಿಜೆಪಿಯ ಮೂರ್ನಾಲ್ಕು ಶಾಸಕರು ಪಕ್ಷಕ್ಕೆ ವಾಪಸ್​ ಬನ್ನಿ ಎಂದಿದ್ದಾರೆ. ಅಶೋಕ್ ಕಚೇರಿಯಲ್ಲಿ ಶಾಸಕರು ಚರ್ಚೆ ಮಾಡಿದ್ದು, ಪಕ್ಷಕ್ಕೆ ವಾಪಸಾಗಿ ಎಂದು ಹೇಳಿದ್ದಾರೆ. ಪಕ್ಷದಲ್ಲಿ ಉತ್ಸಾಹ ಇಲ್ಲ, ಹೋರಾಟಕ್ಕೆ ಜನರೂ ಸೇರುತ್ತಿಲ್ಲ.ನೀವು ಹೋದಲೆಲ್ಲಾ ಸಾವಿರಾರು ಜನ ಸೇರುತ್ತಾರೆ. ಜನಪ್ರಿಯತೆ ಹೆಚ್ಚಾಗಿರುವುದರಿಂದ ಮತ್ತೆ ಬಿಜೆಪಿಗೆ ಬನ್ನಿ ಎಂದಿದ್ದಾರೆ ಎಂದು ಬಿಜೆಪಿ ನಾಯಕ ಅಭಿಪ್ರಾಯವನ್ನು ಬಿಚ್ಚಿಟ್ಟರು.

ಇನ್ನು ಸುಮ್ಮನೇ ಶಾಸಕನಾಗಿ ಬಿಜೆಪಿಗೆ ವಾಪಸ್​ ಹೋಗಲ್ಲ. ಏನಾದರೂ ಮಾತು​ ಕೊಟ್ಟರೆ ಪಕ್ಷಕ್ಕೆ ಬರುತ್ತೇನೆ ಎಂದು ಹೇಳಿದ್ದೇನೆ. ಈಗ ರಾಜ್ಯ ಬಿಜೆಪಿ ಅಧ್ಯಕ್ಷ ಅಥವಾ ವಿಪಕ್ಷ ನಾಯಕನ ಸ್ಥಾನ ನೀಡಬೇಕು. ಮುಂದೆ ಸಿಎಂ ಸ್ಥಾನ ಕೊಡಬೇಕು ಎಂದು ಹೇಳಿದ್ದೇನೆ. ಅಮಿತ್ ಶಾ ಭೇಟಿ ಮಾಡಿಸುತ್ತೇವೆ ಅಂತಾ ನನಗೆ ಯಾರೂ ಹೇಳಿಲ್. ಒಂದು ವೇಳೆ ಅವರಾಗಿ ಕರೆದು ಎಲ್ಲದಕ್ಕೂ ಒಪ್ಪಿಕೊಂಡಿದ್ದೇವೆ ಅಂದ್ರೆ ಹೋಗುತ್ತೇನೆ. ಆ ಅವಕಾಶ ಸಿಕ್ಕಿದರೆ ಮುಂದಿನ ಸೀಟ್​ನಲ್ಲಿ ಕೂರುವುದು. ಇಲ್ಲದಿದ್ದರೆ ಜೆಸಿಬಿ ಪಕ್ಷ ಮಾಡುವುದು ಎಂದು ಸ್ಪಷ್ಟಪಡಿಸಿದರು.