ವಿಜಯೇಂದ್ರ ಬೆನ್ನಲ್ಲೇ ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಶಾಶ್ವತ ಮಿತ್ರರಲ್ಲ ಎಂಬುದು ಸಾಬೀತಾಗಿದೆ. ಹೌದು...ಮೊನ್ನೆ ಧಾರವಾಡದಲ್ಲಿ ಮನೆಯೊಂದರಲ್ಲಿ ಯತ್ನಾಳ್ , ವಿಜಯೇಂದ್ರ ಭೇಟಿ ಮಾಡಿದ್ದು ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಈ ಭೇಟಿ ಬೆನ್ನಲ್ಲೇ ಬೇರೆ ಬೇರೆ ರೀತಿಯ ಚರ್ಚೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಇದೀಗ ಯತ್ನಾಳ್, ಮತ್ತೋರ್ವ ರಾಜಕೀಯ ವೈರಿ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಬಾಗಲಕೋಟೆ, (ಅಕ್ಟೋಬರ್ 20): ಬದ್ಧ ವೈರಿಗಳಾದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ಮಾಡಿದ್ದು ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಶಾಶ್ವತ ಮಿತ್ರರಲ್ಲ ಎಂಬುದು ಸಾಬೀತಾಗಿದೆ. ಹೌದು…ಮೊನ್ನೆ ಧಾರವಾಡದಲ್ಲಿ ಮನೆಯೊಂದರಲ್ಲಿ ಯತ್ನಾಳ್ , ವಿಜಯೇಂದ್ರ ಭೇಟಿ ಮಾಡಿದ್ದು ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಈ ಭೇಟಿ ಬೆನ್ನಲ್ಲೇ ಬೇರೆ ಬೇರೆ ರೀತಿಯ ಚರ್ಚೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಇದೀಗ ಯತ್ನಾಳ್, ಮತ್ತೋರ್ವ ರಾಜಕೀಯ ವೈರಿ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಹೌದು…ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದ ಮುರುಗೇಶ್ ನಿರಾಣಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬಾಗಲಕೋಟೆಯ ನಾರಾಯಣಸಾ ಭಾಂಡಗೆ ಮನೆಯಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಈ ವೇಳೆ ದಸರಾ ಶುಭಾಶಯ ಕೋರಿ ಒಟ್ಟಾಗಿ ಭೋಜನ ಸವಿದು ಹಬ್ಬ ಆಚರಿಸಿರುವುದು ವಿಶೇಷ. ಹೀಗೆ ಯತ್ನಾಳ್ ತಮ್ಮ ರಾಜಕೀಯ ವೈರಿಗಳನ್ನು ಭೇಟಿ ಮಾಡುತ್ತಿರುವುದರಿಂದ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ. ಯತ್ನಾಳ್ ಬಿಜೆಪಿಗೆ ವಾಪಸ್ ಆಗಲು ನಾಯಕರ ಭೇಟಿ ಮುಂದುವರಿಸಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

