ಸಂತ್ರಸ್ತರಿಗೆ ಮನೆ ಕಟ್ಟಿಸಿಲ್ಲವೆಂದ ಸಿದ್ದರಾಮಯ್ಯಗೆ ತಾನು ಕಟ್ಟಿಸಿದ ಮನೆ ತೋರಿಸಿದ ಬಸವರಾಜ ಬೊಮ್ಮಾಯಿ

|

Updated on: Nov 05, 2024 | 4:17 PM

ಹಸೀ ಸುಳ್ಳುಗಳನ್ನು ಹೇಳುವ ಮೂಲಕ ಸಿದ್ದರಾಮಯ್ಯನವರು ತಮ್ಮ ಹುದ್ದೆಯ ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ, ತಾನು ಮುಖ್ಯಮಂತ್ರಿಯಾಗಿದ್ದಾಗ 12,500 ಹೆಚ್ಚು ಮನೆಗಳನ್ನು ಕಟ್ಟಿಸಿರುವೆನೆಂದು ಬೊಮ್ಮಾಯಿ ಹೇಳಿದರು. ಬೊಮ್ಮಾಯಿ ನಂತರ ಮಾತಾಡಿದ ಬಸವಣ್ಣಮ್ಮ ಮನೆಯನ್ನು ಮಾಜಿ ಮುಖ್ಯಮಂತ್ರಿ ಕಟ್ಟಿಸಿರುವುದನ್ನು ಖಚಿತಪಡಿಸಿದರು.

ಹಾವೇರಿ: ಶಿಗ್ಗಾವಿ ಉಪ ಚುನಾವಣೆಯಲ್ಲಿ ತಮ್ಮ ಮಗ ಭರತ್ ಬೊಮ್ಮಾಯಿ ಪರ ಪ್ರಚಾರ ಮಾಡಿದ ಸಂಸದ ಬಸವರಾಜ ಬೊಮ್ಮಾಯಿ, ತಾನು ಮುಖ್ಯಮಂತ್ರಿಯಾಗಿದ್ದಾಗ ಒಂದೇಒಂದು ಮನೆಯನ್ನು ಸಂತ್ರಸ್ತರಿಗೆ ಕಟ್ಟಿಕೊಡಲಿಲ್ಲ ಅಂತ ನಿನ್ನೆ ಸಿದ್ದರಾಮಯ್ಯ ಸವಣೂರಲ್ಲಿ ಸುಳ್ಳು ಹೇಳಿದ್ದಾರೆ, 2021-22 ರಲ್ಲಿ ಪ್ರವಾಹ ಬಂದಿದ್ದಾಗ ಶಿಗ್ಗಾವಿ ತಾಲ್ಲೂಕಿನ ಹಿರೇಮನಕಟ್ಟಿ ಗ್ರಾಮದಲ್ಲಿ ಬಸವಣ್ಣಮ್ಮ ಮಾಳಪ್ಪನವರ್ ವಾಸವಾಗಿರುವ ಮನೆಯನ್ನು ತಾನೇ ಕಟ್ಟಿಸಿದ್ದು, ಈ ಒಂದು ಊರಲ್ಲೇ ತಾನು 300ಕ್ಕೂ ಹೆಚ್ಚು ಮನೆಕಟ್ಟಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಕ್ಫ್​ ಗುಮ್ಮ: ಅನ್ವರ್ ಮಾಣಿಪ್ಪಾಡಿ ವರದಿ ಮೇಲೆ SIT ಅಥವಾ CBI ತನಿಖೆಗೆ ಆಗ್ರಹಿಸಿದ ಬೊಮ್ಮಾಯಿ