‘ಅಂಬರೀಷ್​ ಜತೆ ಸೇರಿ ಮಾಡಬೇಕಾಗಿದ್ದು, ಮಾಡಬಾರದ್ದು ಎರಡನ್ನೂ ಮಾಡಿದ್ದೇವೆ’; ಸಿಎಂ ಬೊಮ್ಮಾಯಿ

| Updated By: ರಾಜೇಶ್ ದುಗ್ಗುಮನೆ

Updated on: Feb 27, 2022 | 3:54 PM

ಅಂಬರೀಷ್​ ಸಮಾಧಿ ಇರುವ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎಂಬುದು ಅವರ ಅಭಿಮಾನಿಗಳು ಹಾಗೂ ಕುಟುಂಬದವರ ಕನಸಾಗಿತ್ತು. ಈಗ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ.

ಅಂಬರೀಷ್ (Ambareesh)​ ಸಮಾಧಿ ಇರುವ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎಂಬುದು ಅವರ ಅಭಿಮಾನಿಗಳು ಹಾಗೂ ಕುಟುಂಬದವರ ಕನಸಾಗಿತ್ತು. ಈಗ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಭೂಮಿ ಪೂಜೆ ಮಾಡಿದ್ದಾರೆ. ಆ ಬಳಿಕ ಮಾತನಾಡಿದ ಅವರು, ಅಂಬಿ ಅವರನ್ನು ನೆನಪಿಸಿಕೊಂಡರು. ‘ಅಂಬರೀಷ್​​ ನನ್ನ ಆತ್ಮೀಯ ಸ್ನೇಹಿತ ಆಗಿದ್ದರು. ನಾನು ಯಾವಾಗಲೂ ಅಂಬರೀಶ್ ಅಂತಾನೇ ಕರೆಯುತ್ತಿದ್ದೆ. ಈಗಲೂ ನಾನು ಹಾಗೆಯೇ ಕರೆಯುತ್ತೇನೆ. ನನಗೆ ಅವರೊಂದಿಗೆ 40 ವರ್ಷಗಳ ಸ್ನೇಹವಿತ್ತು. ನಾವಿಬ್ಬರೂ ರಾಜ್ಯಾದ್ಯಂತ ಸಂಚರಿಸಿದ್ದೇವೆ, ಒಟ್ಟಾಗಿ ಕೆಲಸ ಮಾಡಿದ್ದೇವೆ. ಮಾಡಬೇಕಾಗಿದ್ದು ಹಾಗೂ ಮಾಡಬಾರದ ಎರಡೂ ಕೆಲಸವನ್ನೂ ಮಾಡಿದ್ದೇವೆ’ ಎಂದರು.

ಇದನ್ನೂ ಓದಿ: ಅಂಬರೀಷ್​ ಎದುರು ಎಲೆಕ್ಷನ್​ ನಿಲ್ಲೋಕೆ ಪ್ರೇಮ್​ಗೆ ಬಂದಿತ್ತು ಆಫರ್​; ನಿರಾಕರಿಸಿದ್ದಕ್ಕೆ ಕಾರಣ ತಿಳಿಸಿದ ಡೈರೆಕ್ಟರ್​

ಅಂಬರೀಷ್​ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ; ಅವರು ಸಂಪಾದಿಸಿದ್ದು ಹಣವನ್ನಲ್ಲ, ಅಭಿಮಾನಿಗಳನ್ನು ಎಂದ ಸುಮಲತಾ