ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್ಗೆ ಖುಷಿ
ನಟಿ ಐಶ್ವರ್ಯಾ ಅವರು ಇಷ್ಟು ದಿನಗಳ ಕಾಲ ಸ್ವರ್ಗದಲ್ಲಿ ಹಾಯಾಗಿ ಇದ್ದರು. ಆದರೆ ಈಗ ಅವರು ನರಕದ ಪಾಲಾಗಿದ್ದಾರೆ. ಈ ಶಿಕ್ಷೆಯಿಂದ ಅವರನ್ನು ತಪ್ಪಿಸಲು ಕ್ಯಾಪ್ಟನ್ ಹಂಸಾ ಪ್ರಯತ್ನ ಮಾಡಿದರೂ ಕೂಡ ಅದಕ್ಕೆ ಬಿಗ್ ಬಾಸ್ ಅನುಮತಿ ನೀಡಲಿಲ್ಲ. ಕಡೆಗೂ ಐಶ್ವರ್ಯಾ ಅವರು ನರಕಕ್ಕೆ ಬರುವುದು ಅನಿವಾರ್ಯ ಆಯಿತು. ಇದರಿಂದಾಗಿ ಜಗದೀಶ್ಗೆ ಸಖತ್ ಖುಷಿ ಆಗಿದೆ.
ನರಕದಲ್ಲಿ ಕಾಲ ಕಳೆಯುವುದು ತುಂಬ ಕಷ್ಟ. ಅಲ್ಲಿ ಸ್ಪರ್ಧಿಗಳಿಗೆ ಸರಿಯಾದ ಊಟ ಸಿಗುವುದಿಲ್ಲ. ಇದೇ ಮೊದಲ ಬಾರಿಗೆ ಐಶ್ವರ್ಯಾ ಅವರು ನರಕಕ್ಕೆ ಬರುವಂತಾಗಿದೆ. ಅವರಿಗೆ ಈ ಶಿಕ್ಷೆ ಸಿಕ್ಕಿದ್ದಕ್ಕೆ ಜಗದೀಶ್ ತುಂಬಾ ಖುಷಿಪಟ್ಟಿದ್ದಾರೆ. ಕ್ಯಾಪ್ಟನ್ ಹಂಸಾ ಅವರು ಎರಡನೇ ವಾರ ಸಖತ್ ಕಷ್ಟಪಟ್ಟಿದ್ದಾರೆ. ಎಲ್ಲರ ನಿಷ್ಠುರಕ್ಕೂ ಅವರು ಕಾರಣ ಆಗಿದ್ದಾರೆ. ಅನೇಕ ಬಾರಿ ಕಣ್ಣೀರು ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.