ಮತ್ತೆ ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಬದಲಾಗುವ ಲಕ್ಷಣ ಕಾಣುತ್ತಿಲ್ಲ. ಬೇಡದ ವಿಚಾರಗಳನ್ನು ಅವರು ರಿಪೀಟ್ ಮಾಡುತ್ತಿದ್ದಾರೆ. ಅವರ ವರ್ತನೆಯಿಂದಾಗಿ ಅನೇಕರಿಗೆ ಮುಜುಗರ ಆಗುತ್ತಿದೆ. ಮೊದಲ ವಾರದಲ್ಲಿ ಅತಿಯಾಗಿ ವರ್ತಿಸಿದ ಅವರಿಗೆ ದೊಡ್ಮನೆಯ ಬಹುತೇಕರಿಂದ ವಿರೋಧ ವ್ಯಕ್ತವಾಯಿತು. ಸುದೀಪ್ ಕೂಡ ಕ್ಲಾಸ್ ತೆಗೆದುಕೊಂಡರು. ಆದರೆ ಪ್ರಯೋಜನ ಆದಂತಿಲ್ಲ.
ಎಲ್ಲೆಂದರಲ್ಲಿ ಡ್ರೆಸ್ ಚೇಂಜ್ ಮಾಡುತ್ತಾರೆ. ಮಹಿಳೆಯರು ಇದ್ದಾರೆ ಎಂಬುದನ್ನೂ ನೋಡದೇ ಕೆಟ್ಟ ಪದ ಬಳಸುತ್ತಾರೆ. ಜಗದೀಶ್ ವಿರುದ್ಧ ವಾರದ ಪಂಚಾಯಿತಿಯಲ್ಲಿ ಕೆಲವು ಸ್ಪರ್ಧಿಗಳು ಮಾಡಿದ್ದ ಆರೋಪಗಳಿವು. ಜಗದೀಶ್ ಅವರು ಮಹಿಳೆಯರ ಒಳ ಉಡುಪಿನ ವಿಚಾರ ಮಾತನಾಡಿದ್ದು ಕೂಡ ಬಹುತೇಕರಿಗೆ ಸರಿ ಎನಿಸಿರಲಿಲ್ಲ. ಈಗ ಮಹಿಳೆಯರ ಎದುರು ತಮ್ಮದೇ ಒಳ ಉಡುಪಿನ ವಿಚಾರವನ್ನು ಜಗದೀಶ್ ಪ್ರಸ್ತಾಪಿಸಿದ್ದಾರೆ. ಅದರ ಪ್ರೋಮೋ ಇಲ್ಲಿದೆ. ‘ಈ ವಾರ ಕಂಟೆಂಟ್ ಇನ್ನೂ ಖರಾಬ್ ಆಗಿರಲಿದೆ’ ಎಂದು ಜಗದೀಶ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.