ಮಜಾ ಟಾಕೀಸ್ನಲ್ಲಿ ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ಉಗ್ರಂ ಮಂಜು ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಆಗಾಗ ಇಂಗ್ಲಿಷ್ ಮಾತನಾಡಿ ಟ್ರೋಲ್ ಆಗಿದ್ದರು. ಅದನ್ನು ಸೃಜನ್ ಲೋಕೇಶ್ ಅವರು ಮಜಾ ಟಾಕೀಸ್ನಲ್ಲಿ ನೆನಪು ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಇಂಗ್ಲಿಷ್ನಲ್ಲಿ ಮಾತನಾಡುವಂತೆ ಮಂಜುಗೆ ಸೂಚಿಸಲಾಗಿದೆ. ಅವರ ಮಾತುಗಳನ್ನು ಕೇಳಿದ ಎಲ್ಲರಿಗೂ ಸಿಕ್ಕಾಪಟ್ಟೆ ನಗು ಬಂದಿದೆ.
ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಉಗ್ರಂ ಮಂಜು ಅವರು ಇಂಗ್ಲಿಷ್ ಮಾತನಾಡಿದ್ದು ಸಖತ್ ಟ್ರೋಲ್ ಆಗಿತ್ತು. ಈಗ ಅವರು ಮಜಾ ಟಾಕೀಸ್ ವೇದಿಕೆಯಲ್ಲೂ ಇಂಗ್ಲಿಷ್ ಡೈಲಾಗ್ ಹೇಳಿ ಎಲ್ಲರನ್ನೂ ನಗಿಸಿದ್ದಾರೆ. ಹೊಸ ಸಂಚಿಕೆಗೆ ಅತಿಥಿಯಾಗಿ ಬಂದಿದ್ದ ಗೌತಮಿ ಜಾದವ್, ತ್ರಿವಿಕ್ರಮ್, ಭವ್ಯಾ ಗೌಡ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ. ಬಿಗ್ ಬಾಸ್ ಶೋನಿಂದ ಉಗ್ರಂ ಮಂಜು ಅವರ ಜನಪ್ರಿಯತೆ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos