‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ಗಿಲ್ಲಿ ನಟ ಅವರಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿ ಆಗಿದೆ. ಇದೆಲ್ಲವೂ ಸಾಧ್ಯ ಆಗಿದ್ದು ‘ಬಿಗ್ ಬಾಸ್ ಕನ್ನಡ 12’ ಶೋನಿಂದಾಗಿ. ಇತ್ತೀಚೆಗೆ ಗಿಲ್ಲಿ ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಟ್ರೋಫಿ ಗೆದ್ದರು. ಅದರಿಂದಾಗಿ ಅವರಿಗೆ ಜನಪ್ರಿಯತೆ ಜಾಸ್ತಿ ಆಗಿದೆ. ಅನೇಕ ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳುತ್ತಿದ್ದಾರೆ.
ಗಿಲ್ಲಿ ನಟ ಅವರಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿ ಆಗಿದೆ. ಇದೆಲ್ಲವೂ ಸಾಧ್ಯ ಆಗಿರುವುದು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಿಂದಾಗಿ. ಇತ್ತೀಚೆಗೆ ಗಿಲ್ಲಿ ನಟ ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಟ್ರೋಫಿ ಗೆದ್ದರು. ಅದರಿಂದಾಗಿ ಅವರಿಗೆ ಜನಪ್ರಿಯತೆ ಜಾಸ್ತಿ ಆಗಿದೆ. ಅನೇಕ ಕಾರ್ಯಕ್ರಮಗಳಿಗೆ ಅವರು ಅತಿಥಿಯಾಗಿ ತೆರಳುತ್ತಿದ್ದಾರೆ. ಗಿಲ್ಲಿ ನಟ (Gilli Nata) ಅವರು ಹೊಸ ಬಂಗಾರದ ಮಳಿಗೆಯ ಉದ್ಘಾಟನೆಗೆ ಅತಿಥಿಯಾಗಿ ತೆರಳಿದ್ದಾರೆ. ಅವರ ಕೊರಳಿಗೆ ಶರವಣ ಅವರು ಬಂಗಾರದ ಸರ ತೊಡಿಸಿದ್ದಾರೆ. ‘ಇದು ನನಗೆ ಅಲ್ವಾ ಸರ್’ ಎಂದು ಗಿಲ್ಲಿ ನಟ ಕೇಳಿದ್ದಾರೆ. ‘ಗಿಲ್ಲಿಗಿಂತ ಬೇರೆ ಬಂಗಾರ ಇಲ್ಲ’ ಎಂದು ಶರವಣ ಅವರು ಹೇಳಿದ್ದಾರೆ. ‘ನನ್ನನ್ನು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದಿದ್ದಕ್ಕೆ ಖುಷಿ ಆಗಿದೆ’ ಎಂದಿದ್ದಾರೆ ಗಿಲ್ಲಿ ನಟ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
