ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಲಾಗಿರುವ ಗಣೇಶ್ ಮೂರ್ತಿ ಹೂಳನ್ನು ಬಿಬಿಎಂಪಿ ರಸ್ತೆ ಪಕ್ಕದಲ್ಲಿ ಡಂಪ್ ಮಾಡಿದೆ. ಅದರಲ್ಲಿ ಗಣೇಶನ ಮೂರ್ತಿಗಳು ಇದ್ದು, ದೇವರಿಗೆ ಅವಮಾನಿಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 10): ಗಣೇಶ ಹಬ್ಬ ಮುಗಿದಿದೆ. ಇದೀಗ ಗಣೇಶ್ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮಗಳು ನಡೆಯುತ್ತಿವೆ. ಆಯಾ ಜಿಲ್ಲೆಗಳಲ್ಲಿ ಬಾವಿ, ಹಳ್ಳ, ಕಾಲುವೆ, ನದಿಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತಿದೆ. ಅದರಂತೆ ಬೆಂಗಳೂರಿನಲ್ಲಿ ಗಣೇಶ ಮೂರ್ತಿಗಳನ್ನು ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಲಾಗಿದೆ. ಆದ್ರೆ, ವಿಸರ್ಜನೆ ಮಾಡಿದ್ದ ಗಣೇಶ್ ಮೂರ್ತಿಗಳ ಹೂಳನ್ನ ಬಿಬಿಎಂಪಿ ರಸ್ತೆ ಪಕ್ಕದಲ್ಲಿ ಡಂಪ್ ಮಾಡಿದೆ. ಹೌದು… ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಿದ ಗಣೇಶ ಮೂರ್ತಿಗಳ ಹೂಳನ್ನ ಬೆಂಗಳೂರು ಹೊರವಲಯದ ಮಾದವರ ಬಳಿ ಡಂಪ್ ಮಾಡಲಾಗಿದ್ದು, ಹೂಳಿನಲ್ಲಿ ನೂರಾರು ಗಣೇಶ ಮೂರ್ತಿಗಳಿವೆ. ಈ ಹಿನ್ನೆಲೆಯಲ್ಲಿ , ಗಣೇಶ ಮೂರ್ತಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.