ಬಿಬಿಎಮ್​ಪಿ ನೌಕರರ ಕನ್ನಡ ಸಂಘ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪುನೀತ್ ರಾಜಕುಮಾರ ಪುತ್ಥಳಿಯನ್ನು ಪ್ರತಿಷ್ಠಾಪಿಸಲಿದೆ

ಪುನೀತ್ ಅವರು ನಿಧನರಾದ 3-4 ದಿನಗಳ ಬಳಿಕ ಶಿವದತ್ತ ಪುತ್ಥಳಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವೇ ದಿನಗಳಲ್ಲಿ ನಿರ್ಮಾಣ ಕಾರ್ಯ ಪೂರ್ತಿಗೊಳ್ಳಲಿದೆಯಂತೆ ಹೇಳುತ್ತಾರೆ.

ಪುನೀತ್ ರಾಜಕುಮಾರ್ ಅವರು ಕನ್ನಡನಾಡನ್ನು ಅಗಲಿ ಹೆಚ್ಚು ಕಡಿಮೆ ಒಂದು ತಿಂಗಳಾಗುತ್ತಾ ಬಂತು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈಗಲೂ ಶಾಕ್ನಿಂದ ಹೊರಬರಲಾಗುತ್ತಿಲ್ಲ. ಎಲ್ಲರೂ ಮೌನವಾಗಿ ರೋದಿಸುತ್ತಿದ್ದಾರೆ. ಏತನ್ಮಧ್ಯೆ ಅವರ ನೆನಪಿನಲ್ಲಿ ಬೆಂಗಳೂರು ಮತ್ತು ರಾಜ್ಯದಾದ್ಯಂತ ಪುತ್ಥಳಿಗಳನ್ನು ತಯಾರಿಸಿ ಪ್ರಮುಖ ರಸ್ತೆಗಳಲ್ಲಿ, ಸರ್ಕಲ್ ಗಳಲ್ಲಿ ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘ ಸದಾ ಕನ್ನಡಪರ ಕಾರ್ಯಕ್ರಮಗಳನ್ನು ಮಾಡಿಕೊಂಡಿರುತ್ತದೆ. ಸಂಘದ ಸದಸ್ಯರು ಈಗ ಬಿಬಿಎಮ್ ಪಿ ಕೇಂದ್ರ ಕಚೇರಿ ಆವರಣದಲ್ಲಿ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ನಿರ್ಣಯ ತೆಗೆದುಕೊಂಡಿದ್ದಾರೆ.

ಹಾಗೆ ನೋಡಿದರೆ ಅವರು ಪ್ರತಿಷ್ಠಾಪಿಸಬೇಕೆಂದಿರುವ ಪುನೀತ್ ಪುತ್ಥಳಿ ನಿರ್ಮಾಣ ಕಾರ್ಯ ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿದೆ. ನೀವದನ್ನು ಇಲ್ಲಿ ನೋಡಬಹುದು. ಬನಶಂಕರಿಯಲ್ಲಿ ಸ್ಟುಡಿಯೋ ಇಟ್ಟುಕೊಂಡಿರುವ ಕ್ರಿಯೇಟಿವ್ ಆರ್ಟ್ ಡೈರೆಕ್ಟರ್ ಶಿವದತ್ತ ಅವರು ಪುತ್ಥಳಿಯನ್ನು ನಿರ್ಮಿಸುತ್ತಿದ್ದಾರೆ.

ಶಿವದತ್ತ ಅವರು ಪುತ್ಥಳಿಯ ಮಣ್ಣಿನ ಮಾದರಿಯನ್ನು ತಯಾರಿಸಿದ್ದಾರೆ. ಅಸಲಿಗೆ ಕನ್ನಡ ಸಂಘದವರು ಪ್ರತಿಷ್ಠಾಪಿಸಲು ನಿಶ್ಚಯಿಸಿರೋದು ಕಂಚಿನ ಪುತ್ಥಳಿಯನ್ನು. ಶಿವದತ್ತ ಅವರು ಇದೇ ಮಣ್ಣಿನ ಪುತ್ಥಳಿಯನ್ನು ಕಂಚಿನ ಪ್ರತಿಮೆಯಾಗಿ ರೂಪಾಂತರಿಸುತ್ತಾರೆ. ಯಾವುದೋ ಒಂದು ಟೆಕ್ನಾಲಜಿಯನ್ನು ಬಳಸಿ ಪುತ್ಥಳಿಯ ರೂಪಾಂತರ ಮಾಡುತ್ತಾರಂತೆ.

ಪುನೀತ್ ಅವರು ನಿಧನರಾದ 3-4 ದಿನಗಳ ಬಳಿಕ ಶಿವದತ್ತ ಪುತ್ಥಳಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವೇ ದಿನಗಳಲ್ಲಿ ನಿರ್ಮಾಣ ಕಾರ್ಯ ಪೂರ್ತಿಗೊಳ್ಳಲಿದೆಯಂತೆ ಹೇಳುತ್ತಾರೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ದೊಡ್ಮನೆ ಕುಟುಂಬ ಒಮ್ಮೆ ಇಲ್ಲಿಗೆ ಆಗಮಿಸಿ ಪುತ್ಥಳಿಯನ್ನು ನೋಡಿಕೊಂಡು ಹೋಗಿದೆ.

ಇದನ್ನೂ ಓದಿ:   ರೈಲ್ವೆ ಹಳಿ ಮೇಲೆ ನಿಂತು ವಿಡಿಯೋಕ್ಕೆ ಪೋಸ್​ ಕೊಡುತ್ತಿದ್ದ ಯುವಕನ ದುರಂತ ಸಾವು; ಸರಕು ರೈಲು ಡಿಕ್ಕಿ

Click on your DTH Provider to Add TV9 Kannada