ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿ ಜಿಲ್ಲೆಗೆ ಭೇಟಿ ನೀಡಿದರು ಬಿ ಸಿ ಪಾಟೀಲ
ಇಲ್ಲಿ ಒಂದು ವಿಷಯವನ್ನು ಹೇಳಲೇಬೇಕು. ಪಾಟೀಲ್ ಅವರು ಕೆಲ ಸಮಯದವರೆಗೆ ಮಾಸ್ಕ್ ಧರಿಸದೆ ಎಲ್ಲರೊಂದಿಗೆ ಬೆರೆತರು. ಕೋವಿಡ್ ಪಿಡುಗಿನ ಉಪಟಳ ನಿಂತಿಲ್ಲ. ರಾಜ್ಯದಲ್ಲಿ ಈಗಲೂ ಪ್ರತಿದಿನ 20,000 ಕ್ಕಿಂತ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.
ರಾಜಕೀಯ ಧುರೀಣರು (political leaders) ಯಾವುದಾದರು ಊರಿಗೆ ಭೇಟಿ ನೀಡಿದಾಗ ಊರಿನ ಮಹಿಳೆಯರು, ಆರತಿ ಎತ್ತಿ ಸ್ವಾಗತಿಸುವುದು ವಾಡಿಕೆ. ಸಾಮಾನ್ಯವಾಗಿ ಆರತಿ ಬೆಳಗುವ ಮಹಿಳೆಯರು ಅ ನಿರ್ದಿಷ್ಟ ನಾಯಕ ಪ್ರತಿನಿಧಿಸುವ ಪಕ್ಷದ ಕಾರ್ಯಕರ್ತರಾಗಿರುತ್ತಾರೆ. ಪೊಲೀಸ್ ಅಧಿಕಾರಿ (police officer), ಸಿನಿಮಾ ನಟ (cine actor), ರಾಜಕಾರಣಿ, ಮಂತ್ರಿ ಹೀಗೆ ತಲೆ ಮೇಲೆ ಹಲವಾರು ಹ್ಯಾಟುಗಳನ್ನು ಬದಲಾಯಿಸಿರುವ ಸಚಿವ ಬಿಸಿ ಪಾಟೀಲ (BC Patil) ಅವರು ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಸಹ ಸಹ ಆಗಿದ್ದು ಈ ಜವಾಬ್ದಾರಿ ಹೆಗಲ ಮೇಲೆ ಬಿದ್ದ ನಂತರ ಮೊದಲ ಬಾರಿಗೆ ಜಿಲ್ಲಾ ಕೇಂದ್ರಕ್ಕೆ ಗುರುವಾರ ಆಗಮಿಸಿದರು. ಸಂಪ್ರದಾಯದಂತೆ ಕೆಲವು ಮಹಿಳೆಯರು ಸಚಿವರಿಗೆ ಆರತಿ ಬೆಳಗಿ ಸ್ವಾಗತಿಸಿದರು ಮತ್ತು ಪಾಟೀಲರು ವಾಡಿಕೆಯಂತೆ ಅರತಿ ತಟ್ಟೆಗೆ ಹಣ ಹಾಕಿದರು. ಹಿಂದೆ ಬಾಬುರಾವ್ ಚಿಂಚನಸೂರ (Baburao Chinchansur) ಶಾಸಕ ಮತ್ತು ಮಂತ್ರಿಯಾಗಿದ್ದಾಗ ತಾವು ಭೇಟಿ ನೀಡುವ ಸ್ಥಳಗಳಲ್ಲಿ ತನಗೆ ಆರತಿ ಬೆಳಗಿಸುವ ವ್ಯವಸ್ಥೆ ಮಾಡಿಸಬೇಕು ಅಂತ ಅಲ್ಲಿನ ಸ್ಥಳೀಯ ನಾಯಕರಿಗೆ ಹೇಳಿರುತ್ತಿದ್ದರು. ಆರತಿ ಮಾಡಿಸಿಕೊಳ್ಳುವುದೆಂದರೆ ಅವರಿಗೆ ಅಷ್ಟು ಪ್ರೀತಿ. ಹಾಗೆಯೇ ಅವರು ಆರತಿ ತಟ್ಟೆಗೆ ಧಾರಾಳವಾಗಿ ಹಣ ಹಾಕುತ್ತಿದ್ದರು. ಆ ಕಾರಣಕ್ಕಾಗೇ ಕಲಬುರಗಿ ಜಿಲ್ಲೆಯ ಹಳ್ಳಿಗಳಲ್ಲಿ ಮಹಿಳೆಯರು ತಾ ಮುಂದು ನಾ ಮುಂದು ಅಂತ ಬಾಬುರಾವ್ ಗೆ ಆರತಿ ಬೆಳಗುತ್ತಿದ್ದರು.
ಪಾಟೀಲ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿದರು ಮತ್ತು ಕೆಲ ಕಡತಗಳನ್ನು ಸಹ ಸ್ಥಳದಲ್ಲೇ ಪರಿಶೀಲಿಸಿದರು. ಅದಾದ ಮೇಲೆ ಅವರು ಮಹಿಳಾ ಕಾರ್ಯಕರ್ತರೊಂದಿಗೆ ಪೋಟೊ ತೆಗೆಸಿಕೊಂಡರು. ಸಚಿವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಸ್ಪರ್ಧೆ ನಡೆದಂತೆ ನೋಡುಗರಿಗೆ ಭಾಸವಾಗುತಿತ್ತು.
ಇಲ್ಲಿ ಒಂದು ವಿಷಯವನ್ನು ಹೇಳಲೇಬೇಕು. ಪಾಟೀಲ್ ಅವರು ಕೆಲ ಸಮಯದವರೆಗೆ ಮಾಸ್ಕ್ ಧರಿಸದೆ ಎಲ್ಲರೊಂದಿಗೆ ಬೆರೆತರು. ಕೋವಿಡ್ ಪಿಡುಗಿನ ಉಪಟಳ ನಿಂತಿಲ್ಲ. ರಾಜ್ಯದಲ್ಲಿ ಈಗಲೂ ಪ್ರತಿದಿನ 20,000 ಕ್ಕಿಂತ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.