25 ವರ್ಷಗಳಿಂದ ಮನೆ ಕಟ್ಟಲಾಗದೆ ಪರದಾಟ: ಬನಶಂಕರಿ 6ನೇ ಹಂತದ 329 ಬಿಡಿಎ ನಿವೇಶನದಾರರಿಗೆ ಅರಣ್ಯ ಇಲಾಖೆಯಿಂದ ಅಡ್ಡಿ

Edited By:

Updated on: Sep 23, 2026 | 12:06 PM

ಕಳೆದ 25 ವರ್ಷಗಳಿಂದ ಬಿಡಿಎ ಹಂಚಿಕೆ ಮಾಡಿದ ನಿವೇಶನ ಪಡೆದಿದ್ದರೂ, ಬನಶಂಕರಿ 6ನೇ ಹಂತದ 3ನೇ ಬ್ಲಾಕ್‌ನ 329 ಕುಟುಂಬಗಳಿಗೆ ಮನೆ ಕಟ್ಟಲು ಸಾಧ್ಯವಾಗಿಲ್ಲ. ತುರಹಳ್ಳಿ ಅರಣ್ಯ ಸಮೀಪದ ಬಫರ್ ಝೋನ್‌ನಲ್ಲಿ ನಿವೇಶನಗಳಿರುವುದರಿಂದ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ. ಬಫರ್ ವಲಯದಲ್ಲಿ ನಿರ್ಮಾಣಕ್ಕೆ ಅನುಮತಿ ನಿರಾಕರಿಸುತ್ತಿದ್ದು, ಬಿಡಿಎ ಮತ್ತು ಅರಣ್ಯ ಇಲಾಖೆ ನಡುವಿನ ಜಟಾಪಟಿಗೆ ಸಾರ್ವಜನಿಕರು ಹೈರಾಣಾಗಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​​ 23: ಬನಶಂಕರಿ 6ನೇ ಹಂತದ 3ನೇ ಬ್ಲಾಕ್​​ನಲ್ಲಿನ 329 ಬಿಡಿಎ ನಿವೇಶನದಾರರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದು, ಕಳೆದ 25 ವರ್ಷಗಳಿಂದ ಮನೆ ಕಟ್ಟಲಾಗದೆ ಪರದಾಟ ನಡೆಸುತ್ತಿದ್ದಾರೆ. ಬಿಡಿಎಯಿಂದ ನಿವೇಶನ ಸಿಕ್ಕಿದೆಯಾದರೂ ಮನೆ ಕಟ್ಟೋಕೆ ಅರಣ್ಯ ಇಲಾಖೆ ಅನುಮತಿ ಕೊಡ್ತಿಲ್ಲ. ಹೆಮ್ಮಿಗೆಪುರದ ವಿವಿಧ ಸರ್ವೇ ನಂಬರ್​​ಗಳಲ್ಲಿರುವ ಈ ನಿವೇಶನಗಳು ಪಕ್ಕದಲ್ಲೇ ತುರುಹಳ್ಳಿ ಅರಣ್ಯವಿದೆ. ಹೀಗಾಗಿ ಇದು ಬಫರ್ ಜೋನ್ ವಲಯ, ಮನೆ ಕಟ್ಟಬೇಡಿ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಆರಂಭದಲ್ಲಿ ಕೆಲವರಿಗೆ ಅನುಮತಿ ಸಿಕ್ಕಿತ್ತಾದರೂ 2018ರಿಂದ ಈವರಿಗೆ ಅನುಮತಿ ಕೊಡ್ತಿಲ್ಲ. ಈ ಸಂಬಂಧ ಬಿಡಿಎ ಹಾಗೂ ಅರಣ್ಯ ಇಲಾಖೆ ಹಲವು ಬಾರಿ ಸಭೆ ನೆಡೆಸಿದೆಯಾದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us