ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕರಡಿಗಳ ಹಾವಳಿ, ಗ್ರಾಮಸ್ಥರ ದೂರುಗಳಿಗೆ ಸ್ಪಂದಿಸುತ್ತಿಲ್ಲ ಅರಣ್ಯಾಧಿಕಾರಿಗಳು
ಗ್ರಾಮದ ಜನ ಚೀರುತ್ತಾ, ಗಲಾಟೆ ಮಾಡಿ ಕೈಯಲ್ಲಿ ಬಡಿಗೆಗಳನ್ನು ಹಿಡಿದು ಅದನ್ನು ಕಾಡಿಗೆ ವಾಪಸ್ಸು ಓಡಿಸುತ್ತಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರಿದರೂ ಪ್ರಯೋಜನವಾಗಿಲ್ಲವಂತೆ.
Koppal: ಮಲೆನಾಡು (Malnad) ಪ್ರದೇಶಗಳಲ್ಲಿ ಕಾಡಾನೆ, ಚಿರತೆ ಮತ್ತು ಹುಲಿಗಳ ಜನವಸತಿ ಪ್ರದೇಶಗಳಿಗೆ ಲಗ್ಗೆಯಿಟ್ಟು ಜನರಿಗೆ ತೊಂದರೆ ಕೊಡುತ್ತಿದ್ದರೆ ಬಿಸಿಲು ನಾಡು ಕೊಪ್ಪಳ (Koppal) ಜಿಲ್ಲೆ ಮತ್ತು ಅದರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನ ಕರಡಿಗಳ (bears) ಹಾವಳಿಯಿಂದ ಆತಂಕಕ್ಕೊಳಗಾಗಿದ್ದಾರೆ. ಜಿಲ್ಲೆಯ ಗ್ರಾಮವೊಂದರಲ್ಲಿ ಹೊಲದಲ್ಲಿರುವ ಮನೆಯ ಮೇಲೆ ಕರಡಿ ಹತ್ತಿರುವುದನ್ನು ಇಲ್ಲಿ ನೋಡಬಹುದು. ಗ್ರಾಮದ ಜನ ಚೀರುತ್ತಾ, ಗಲಾಟೆ ಮಾಡಿ ಕೈಯಲ್ಲಿ ಬಡಿಗೆಗಳನ್ನು ಹಿಡಿದು ಅದನ್ನು ಕಾಡಿಗೆ ವಾಪಸ್ಸು ಓಡಿಸುತ್ತಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರಿದರೂ ಪ್ರಯೋಜನವಾಗಿಲ್ಲವಂತೆ.
ಇದನ್ನೂ ಓದಿ: