ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ

ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 06, 2023 | 1:51 PM

ಉತ್ತರ ಕರ್ನಾಟಕದ ಸಮಸ್ಯೆಗಳು ವಿಧಾನ ಸಭಾ ಆದಿವೇಶನದಲ್ಲಿ ಚರ್ಚೆ ಆಗುತ್ತಿಲ್ಲ ಅಂತಾದರೆ ಅದಕ್ಕೆ ಅ ಭಾಗದ ಜನ ಪ್ರತಿನಿಧಿಗಳು ಸಹ ಕಾರಣರಾಗುತ್ತಾರೆ. ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕಡೆ ಗಮನ ಹರಿಸಬೇಕು, ಪರಿಹಾರ ಒದಗಿಸಬೇಕು ಅಂತ ಪಟ್ಟುಹಿಡಿದು ಮಾತಾಡಿದರೆ ಹೇಗೆ ತಾನೆ ಸರ್ಕಾರ ಅವರ ಮಾತನ್ನು ನಿರ್ಲಕ್ಷಿಸೀತು? ಲಕ್ಷ್ಮಣ ಸವದಿ ಅವರಲ್ಲಿರುವಂಥ ಇಚ್ಛಾಶಕ್ತಿಯನ್ನು ಉತ್ತರ ಕರ್ನಾಟಕದ ಉಳಿದೆಲ್ಲ ಶಾಸಕರು ಪ್ರದರ್ಶಿಸಬೇಕು.

ಬೆಳಗಾವಿ: ವಿಧಾನಮಂಡಲ ಅಧಿವೇಶನದ ಮೂರನೇ ದಿನವಾದ ಆಡಳಿತ ಪಕ್ಷದ ಶಾಸಕ ಲಕ್ಷ್ಮಣ ಸವದಿ (Laxman Savadi) ರೊಚ್ಚಿಗೆದ್ದಿದ್ದರು. ಅವರ ದೂರು ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ (Belagavi Assembly Session)ನ ಡೆಸುವ ಉದ್ದೇಶದ ಬಗ್ಗೆ ಆಗಿತ್ತು. ಬೆಂಗಳೂರಿನಲ್ಲಿ ಅಧಿವೇಶನ ನಡೆದಾಗ ಉತ್ತರ ಕರ್ನಾಟಕ ಸಮಸ್ಯೆಗಳು (north Karnataka issues) ಕಡೆಗಣಿಸಲ್ಪಡುತ್ತವೆ, ಈ ಭಾಗಕ್ಕೆ ವಿಧಾನಸಭೆಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕರೂ ಸಮಸ್ಯೆಗಳು ಮಾತ್ರ ಚರ್ಚೆಗೆ ಬಾರದೆ ಹಾಗೆಯೇ ಉಳಿದುಬಿಡುತ್ತವೆ ಅಂತ ಉತ್ತರ ಭಾಗದ ನಾಯಕರು ದೂರಿದ ಕಾರಣ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣವಾಗಿ ಚಳಿಗಾಲದ ಅಧಿವೇಶನ ನಡೆಸುವುದು ಶುರುವಾಯಿತು. ಆದರೆ, ಈಗಲೂ ಅದೇ ಗೋಳು ಅಂತ ಸವದಿ ಹೇಳುತ್ತಿದ್ದಾರೆ. ನಿನ್ನೆ ಸದನದಲ್ಲಿ ಬ್ರ್ಯಾಂಡ್ ಬಗ್ಗೆ ಅನಗತ್ಯ ಚರ್ಚೆ ನಡೆದಿದ್ದು ಪ್ರಾಯಶಃ ಶಾಸಕನ್ನ ಕೆರಳಿಸಿರಬಹುದು. ಸಭಾಧ್ಯಕ್ಷರೇ, ಬೆಂಗಳೂರು ಅಭಿವೃದ್ಧಿಯನ್ನು ಚರ್ಚಿಸಲು ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿಲ್ಲ, ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡಿ ಅಂತ ಅವರು ಸ್ಪೀಕರ್ ಯುಟಿ ಖಾದರ್ ಮೇಲೆ ಒತ್ತಡ ಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 06, 2023 01:48 PM