AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಶಿಕ್ಷಣ ಇಲಾಖೆ ಎಡವಟ್ಟು: ಗರ್ಭಿಣಿ, ವಿಶೇಷ ಚೇತನ ಶಿಕ್ಷಕರನ್ನೂ ಜಾತಿ ಗಣತಿಗೆ ನಿಯೋಜನೆ

ಬೆಳಗಾವಿ ಶಿಕ್ಷಣ ಇಲಾಖೆ ಎಡವಟ್ಟು: ಗರ್ಭಿಣಿ, ವಿಶೇಷ ಚೇತನ ಶಿಕ್ಷಕರನ್ನೂ ಜಾತಿ ಗಣತಿಗೆ ನಿಯೋಜನೆ

Sahadev Mane
| Edited By: |

Updated on:Sep 23, 2025 | 4:12 PM

Share

ರಾಜ್ಯಾದ್ಯಂತ ಜಾತಿಗಣತಿ ಜೋರಾಗಿ ನಡೆಯುತ್ತಿದೆ. ಎರಡನೇ ದಿನವಾದ ಇಂದು ಕೂಡ ಮನೆ ಮನೆಗೆ ತೆರಳಿ ಗಣತಿ ಮಾಡುತ್ತಿದ್ದಾರೆ. ಆದ್ರೆ ಹಲವೆಡೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದರಿಂದ ಶಿಕ್ಷಕರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆ ಎಡವಟ್ಟು ಮಾಡಿದೆ. ಮೃತ ಶಿಕ್ಷಕರು, ಗರ್ಭಿಣಿ, ವಿಶೇಷ ಚೇತನರು, ಹಾಗೂ ಅನಾರೋಗ್ಯ ಪೀಡಿತ ಶಿಕ್ಷಕರನ್ನೂ ಸಹ ಈ ಜಾತಿಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ, (ಸೆಪ್ಟೆಂಬರ್ 23): ರಾಜ್ಯಾದ್ಯಂತ ಜಾತಿಗಣತಿ ಜೋರಾಗಿ ನಡೆಯುತ್ತಿದೆ. ಎರಡನೇ ದಿನವಾದ ಇಂದು ಕೂಡ ಮನೆ ಮನೆಗೆ ತೆರಳಿ ಗಣತಿ ಮಾಡುತ್ತಿದ್ದಾರೆ. ಆದ್ರೆ ಹಲವೆಡೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದರಿಂದ ಶಿಕ್ಷಕರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆ ಎಡವಟ್ಟು ಮಾಡಿದೆ. ಮೃತ ಶಿಕ್ಷಕರು, ಗರ್ಭಿಣಿ, ವಿಶೇಷ ಚೇತನರು, ಹಾಗೂ ಅನಾರೋಗ್ಯ ಪೀಡಿತ ಶಿಕ್ಷಕರನ್ನೂ ಸಹ ಈ ಜಾತಿಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಟಿವಿ9ಗೆ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ್ ಪ್ರತಿಕ್ರಿಯಿಸಿದ್ದು, ತರಾತುರಿಯಲ್ಲಿ ಗಣತಿಗೆ ಶಿಕ್ಷಕರನ್ನ ನೇಮಕ ಮಾಡಿದ್ದನ್ನ ಖಂಡಿಸುತ್ತೇವೆ.ವಿಶೇಷ ಚೇತನರು, ಅನಾರೋಗ್ಯ ಪೀಡಿತ ಶಿಕ್ಷಕರನ್ನು ನಿಯೋಜನೆ ಮಾಡಿದ್ದಾರೆ. ಇದನ್ನ ಖಂಡಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ಅಪರ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ. ಅವರು ನಿರ್ಧಾರ ಪ್ರಕಟ ಮಾಡುವವರೆಗೂ ಗಣತಿ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಂಗವಿಕಲ ಹಾಗೂ ಗರ್ಭಿಣಿ ಶಿಕ್ಷರನ್ನು ನಿಯೋಜನೆ  ಒಂದು ಕಡೆ ಇರಲಿ. ಆದ್ರೆ, ಮೃತ ಶಿಕ್ಷಕರ ಹೆಸರು ಇಲಾಖೆ ಗಮನಕ್ಕಿಲ್ಲ ಎನ್ನುವುದು ವಿಪರ್ಯಾಸವೇ ಸರಿ.

Published on: Sep 23, 2025 03:50 PM