ದುರ್ಗಾ ಪೂಜೆಯ ಸಂಭ್ರಮದಲ್ಲಿರುವ ಕೊಲ್ಕತ್ತಾದಲ್ಲಿ ಪ್ರವಾಹ; ಭಾರೀ ಮಳೆಯಿಂದ 9 ಜನ ಸಾವು
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಬೆಳಗಿನ ಜಾವ ಮಳೆಯಲ್ಲಿ ಕೆಲಸಕ್ಕೆ ಸೈಕಲ್ ಸವಾರಿ ಮಾಡುತ್ತಿದ್ದಾಗ ನೀರಿನ ರಭಸಕ್ಕೆ ಸೈಕಲ್ ಮೇಲೆ ಸಮತೋಲನ ತಪ್ಪಿ ಬಿದ್ದರು. ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ವಿದ್ಯುತ್ ಕಂಬದ ಮೇಲೆ ಕೈ ಹಾಕಿದರು. ತಕ್ಷಣ ವಿದ್ಯುತ್ ಸ್ಪರ್ಶಿಸಿ ಅವರ ಪ್ರಾಣ ಬಲಿಯಾಯಿತು. ಈ ರೀತಿ ಇದುವರೆಗೂ 9 ಜನ ಸಾವನ್ನಪ್ಪಿದ್ದಾರೆ.
ಕೊಲ್ಕತ್ತಾ, ಸೆಪ್ಟೆಂಬರ್ 23: ನವರಾತ್ರಿ ಶುರುವಾಗಿದೆ. ಈ ದಸರಾ ಹಬ್ಬವನ್ನು ಪಶ್ಚಿಮ ಬಂಗಾಳದಲ್ಲಿ ಬಹಳ ವೈಭವದಿಂದ ದುರ್ಗಾಪೂಜೆಯಾಗಿ (Durga Puja) ಆಚರಿಸಲಾಗುತ್ತದೆ. ಆದರೆ, ಇದೀಗ ಕೊಲ್ಕತ್ತಾದಲ್ಲಿ ಪ್ರವಾಹದ (Kolkata Rains) ಸ್ಥಿತಿ ನಿರ್ಮಾಣವಾಗಿದೆ. ಸತತ 5 ಗಂಟೆಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ 9 ಮಂದಿ ಸಾವನ್ನಪ್ಪಿದ್ದಾರೆ. ತೆರೆದ ತಂತಿಗಳು ಸಿಲುಕಿ ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆಯಿಂದ ನಿರಂತರ ಮಳೆಯಿಂದಾಗಿ ಕೊಲ್ಕತ್ತಾ ಸಂಪೂರ್ಣವಾಗಿ ಮುಳುಗಿ ಹೋಗಿದೆ. ನಗರದ ಬೀದಿಗಳು ಒಂದರ ನಂತರ ಒಂದರಂತೆ ಸೊಂಟದಷ್ಟು ನೀರಿನಲ್ಲಿ ಮುಳುಗಿವೆ. ಮನೆಯೊಳಗೆ, ಆಸ್ಪತ್ರೆಯೊಳಗೆ ಎಲ್ಲ ಕಡೆಯೂ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ದುರ್ಗಾಪೂಜೆಗೆಂದು ಹಾಕಲಾಗಿದ್ದ ಪೆಂಡಾಲ್ಗಳಲ್ಲಿ ನೀರು ತುಂಬಿದೆ. ಇಂದು ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ 30ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇನ್ನೆರಡು ದಿನ ಕೊಲ್ಕತ್ತಾದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

