ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಹಣ ನೀಡಿಕೆಗೆ ನಟ ಚೇತನ್ ವಿರೋಧ: ಸಿಎಂ ವಿರುದ್ಧ ಆಕ್ರೋಶ

| Updated By: ಗಂಗಾಧರ​ ಬ. ಸಾಬೋಜಿ

Updated on: May 24, 2024 | 8:23 PM

ಅಂಜನಾದ್ರಿ ಹನುಮ ಮಂದಿರ ಅಭಿವೃದ್ದಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಹಣ ನೀಡಿಕೆ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಟ ಚೇತನ, ಅಲೆಮಾರಿ ಜನಾಂಗಕ್ಕೆ ಬಜೆಟ್​​ನಲ್ಲಿ ಒಂದು ರೂಪಾಯಿ ಹಣ ನೀಡಿಲ್ಲ. ಅದನ್ನ ಬಿಟ್ಟು ಅಂಜನಾದ್ರಿ ಹನುಮ ಜನ್ಮ ಭೂಮಿಗೆ 100 ಕೋಟಿ ರೂ. ಕೊಟ್ಟಿದ್ದೆ ಸರ್ಕಾರದ ಆದ್ಯತೆನಾ ಎಂದು ಪ್ರಶ್ನಿಸಿದ್ದಾರೆ.

ಚಿಕ್ಕೋಡಿ, ಮೇ 24: ಅಲೆಮಾರಿ ಜನಾಂಗಕ್ಕೆ ಬಜೆಟ್​​ನಲ್ಲಿ ಒಂದು ರೂಪಾಯಿ ಹಣ ನೀಡಿಲ್ಲ. ಅದನ್ನ ಬಿಟ್ಟು ಅಂಜನಾದ್ರಿ ಹನುಮ ಜನ್ಮ ಭೂಮಿಗೆ 100 ಕೋಟಿ ರೂ. ಕೊಟ್ಟಿದ್ದೆ ಸರ್ಕಾರದ ಆದ್ಯತೆನಾ ಎಂದು ನಟ ಚೇತನ (Chethan) ಪ್ರಶ್ನೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಅಂಜನಾದ್ರಿ (Anjeyanadri Hill) ಹನುಮ ಮಂದಿರ ಅಭಿವೃದ್ದಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಹಣ ನೀಡಿಕೆ ವಿಚಾರವಾಗಿ ಮಾತನಾಡಿದ ಅವರು, ಅದೇ ಹಣವನ್ನು ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಬಳಕೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. 82 ಕುಟುಂಬಗಳು ಇನ್ನೂ ಕೂಡ ಬಡತನದಲ್ಲಿವೆ. ಗುಡಿಸಲಿನಲ್ಲಿ ಬದುಕು ಸಾಗಿಸುತ್ತಿದ್ದಾರೆ. ಚಿಕ್ಕೋಡಿ ಪಟ್ಟಣದ ರಾಮನಗರ ಅಲೆಮಾರಿ ಜನಾಂಗದವರಿಗೆ ಸೂರು ನೀಡುವಂತೆ ಒತ್ತಾಯಿಸಿದ್ದಾರೆ. ಜಾತಿ ಜನಗಣತಿ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಪರ ಕಿಡಿಕಾರಿರುವ ನಟ ಚೇತನ, ಸಿದ್ದರಾಮಯ್ಯ ಅಹಿಂದ ಪರ ಕೆಲಸ ಮಾಡುತ್ತಿಲ್ಲ ಅವರು ಸೋಮಾರಿ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದ್ದಾರೆ. ಶ್ರೀಮಂತರ ಆಸ್ತಿ ಬಡವರಿಗೆ ಮರು ಹಂಚಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 24, 2024 07:58 PM