ಬಳ್ಳಾರಿಯಲ್ಲಿ ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಬಳ್ಳಾರಿ ಕಾಂಗ್ರೆಸ್ ಸಂಸದ ತುಕಾರಾಂ ನಿವಾಸದ ಮೇಲೆ ನಡೆದಿದ್ದ ಇಡಿ ದಾಳಿ ಅಂತ್ಯವಾಗಿದೆ. ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದಲ್ಲಿರುವ ತುಕಾರಾಂ ನಿವಾಸದಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬ್ಯಾಗ್ ನಲ್ಲಿ ಒಂದಿಷ್ಟು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನು ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತುಕಾರಾಂ, ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾರೆ.
ಬಳ್ಳಾರಿ, (ಜೂನ್ 11): ಬಳ್ಳಾರಿ ಕಾಂಗ್ರೆಸ್ ಸಂಸದ ತುಕಾರಾಂ ನಿವಾಸದ ಮೇಲೆ ನಡೆದಿದ್ದ ಇಡಿ ದಾಳಿ ಅಂತ್ಯವಾಗಿದೆ. ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದಲ್ಲಿರುವ ತುಕಾರಾಂ ನಿವಾಸದಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬ್ಯಾಗ್ ನಲ್ಲಿ ಒಂದಿಷ್ಟು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನು ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತುಕಾರಾಂ,ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ಬೆಳಗ್ಗೆ 6.30ಕ್ಕೆ ಸರ್ಚ್ ವಾರಂಟ್ ಜತೆ ಬಂದು ತಪಾಸಣೆ ಮಾಡಿದ್ರು. 6 ಅಧಿಕಾರಿಗಳನ್ನೊಳಗೊಂಡ ತಂಡ ಬಂದಿತ್ತು. ವಾಲ್ಮೀಕಿ ನಿಗಮದ ಬಗ್ಗೆ ಇಡಿ ಅಧಿಕಾರಿಗಳು ನನಗೆ ಪ್ರಶ್ನೆ ಕೇಳಿದರು. ವಾಲ್ಮೀಕಿ ನಿಗಮ ಹಗರಣಕ್ಕೂ ನನಗೂ ಸಂಬಂಧ ಇಲ್ಲ ಎಂದಿದ್ದೇನೆ. ಮಾಹಿತಿ ನೀಡಿದ್ದೇನೆ. ನಾನು ಹುಟ್ಟಿದಾಗಿನಿಂದ ಈವರೆಗೂ ಯಾರ ಭಯನೂ ಇಲ್ಲ. ಪ್ರೀತಿ, ಅಭಿಮಾನ ಇರುವುದರಿಂದಲೇ ನಾನು ಗೆಲ್ಲುತ್ತಿರುವುದು. ಜನರು ನನ್ನ ಜೊತೆ ಇರುವವರೆಗೂ ನನಗೆ ಯಾವ ಭಯನೂ ಇಲ್ಲ ಎಂದರು.
ನಾನು ಆಸ್ತಿನೇ ಮಾಡಿಲ್ಲ, ಮಕ್ಕಳನ್ನೇ ಆಸ್ತಿ ಮಾಡಿಕೊಂಡಿದ್ದೇನೆ. ನಾನು ಯಾವುದನ್ನು ಹೇಳಲ್ಲ, ದೇವರು ಎಲ್ಲವನ್ನೋ ನೋಡಿಕೊಳ್ತಾನೆ. ಸಂತೋಷ್ ಲಾಡ್ ನಮ್ಮ ಜತೆ ಇರುವಾಗ ನಮಗೇನು ಆಗುವುದಿಲ್ಲ. ಯಾವ ಉದ್ದೇಶಕ್ಕಾದ್ರೂ ಬರಲಿ ಅದನ್ನು ದೇವರು ನೋಡಿಕೊಳ್ತಾನೆ ಎಂದು ಹೇಳಿದರು.
ED ಅಧಿಕಾರಿಗಳು ನಮ್ಮ ಮನೆಯಲ್ಲಿ ಏನು ಜಪ್ತಿ ಮಾಡಿಲ್ಲ. ಕೆಲವು ಪ್ರಶ್ನೆ ಕೇಳಿದ್ರು, ಅಧಿಕಾರಿಗಳಿಗೆ ಸಹಕರಿಸಿದ್ದೇನೆ. ರಾಜಕೀಯ ಅಂದ್ರೆ ವಿಪಕ್ಷಗಳು ಷಡ್ಯಂತ್ರ ಮಾಡುತ್ತವೆ. ಯಾರು ಏನೇ ಮಾಡಿದ್ರೂ ನಮ್ಮನ್ನ ಏನು ಮಾಡೋಕಾಗಲ್ಲ. ನಾನು ಜನರ ಪ್ರೀತಿಯಿಂದ ಗೆದ್ದಿದ್ದೇನೆ. 40-50 ಕೋಟಿ ಜಪ್ತಿ ಎಂದು ವದಂತಿ ಹರಿದಾಡ್ತಿದೆ. ಆದ್ರೆ, ಅದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್ನಲ್ಲಿ ಸಿಲಿಕಾನ್ ಸಿಟಿ ಕೂಲ್ ಕೂಲ್

ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?

ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್

ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
