ನಾಯಕರ ಬ್ಯಾನರ್ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ರಕ್ತ ರಾಜಕೀಯ.. ಹಿಂದೊಮ್ಮೆ ಗಣಿ ದೂಳಿನಿಂದ್ಲೇ ಸುದ್ದಿಯಾಗಿದ್ದ ಬಳ್ಳಾರಿ ರಕ್ತ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಹೌದು.. ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್ ಇಡೀ ಜಿಲ್ಲೆಯಲ್ಲಿ ಸಂಘರ್ಷವನ್ನೇ ಸೃಷ್ಟಿಸಿದೆ. ಜನಾರ್ಧನ್ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಭೀಕರ ಸಂಘರ್ಷವೇ ನಡೆದುಹೋಗಿದೆ. ಕಲ್ಲು ತೂರಾಟ, ಖಾರದು ಪುಡಿ ಎರೆಚಾಟ, ದೊಣ್ಣೆಯಿಂದ ಬಡಿದಾಟ ಇಷ್ಟೇ ಯಾಕೆ ಗಾಳಿಯಲ್ಲಿ ಫೈರಿಂಗ್ ಮಾಡಲಾಗಿದೆ. ಈ ಸಂಘರ್ಷದ ನಡುವೆ ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ಬಳ್ಳಾರಿಯ ಹುಸೇನ್ನಗರದ ಮನೆಯಿಂದ ರಾಜಶೇಖರ್ ಶವಯಾತ್ರೆ ವೇಳೆ ಶಾಸಕರಾದ ಭರತ್ ರೆಡ್ಡಿ, ಗಣೇಶ್ ಹೆಗಲು ಕೊಟ್ಟರು.
ಬಳ್ಳಾರಿ, (ಜನವರಿ 02): ರಕ್ತ ರಾಜಕೀಯ.. ಹಿಂದೊಮ್ಮೆ ಗಣಿ ದೂಳಿನಿಂದ್ಲೇ ಸುದ್ದಿಯಾಗಿದ್ದ ಬಳ್ಳಾರಿ ರಕ್ತ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಹೌದು.. ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್ ಇಡೀ ಜಿಲ್ಲೆಯಲ್ಲಿ ಸಂಘರ್ಷವನ್ನೇ ಸೃಷ್ಟಿಸಿದೆ. ಜನಾರ್ಧನ್ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಭೀಕರ ಸಂಘರ್ಷವೇ ನಡೆದುಹೋಗಿದೆ. ಕಲ್ಲು ತೂರಾಟ, ಖಾರದು ಪುಡಿ ಎರೆಚಾಟ, ದೊಣ್ಣೆಯಿಂದ ಬಡಿದಾಟ ಇಷ್ಟೇ ಯಾಕೆ ಗಾಳಿಯಲ್ಲಿ ಫೈರಿಂಗ್ ಮಾಡಲಾಗಿದೆ. ಈ ಸಂಘರ್ಷದ ನಡುವೆ ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ಬಳ್ಳಾರಿಯ ಹುಸೇನ್ನಗರದ ಮನೆಯಿಂದ ರಾಜಶೇಖರ್ ಶವಯಾತ್ರೆ ವೇಳೆ ಶಾಸಕರಾದ ಭರತ್ ರೆಡ್ಡಿ, ಗಣೇಶ್ ಹೆಗಲು ಕೊಟ್ಟರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jan 02, 2026 03:32 PM

