‘ಚೆನ್ನಾಗಿ ಅಲ್ಲಾಡಿಸಿದ್ದೀನಾ?’: ಬೆಳ್ಳುಳ್ಳಿ ಕಬಾಬ್ ಚಂದ್ರು ಬಳಿ ಅಭಿಪ್ರಾಯ ಕೇಳಿದ ಸುನಿ

Updated on: Feb 13, 2024 | 12:40 PM

ಫೆ.12ರ ಸಂಜೆ ಬೆಂಗಳೂರಿನಲ್ಲಿ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಸೆಲೆಬ್ರಿಟಿ ಶೋ ಏರ್ಪಡಿಸಲಾಗಿತ್ತು. ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ಚಂದ್ರು ಕೂಡ ಸೆಲೆಬ್ರಿಟಿ ಶೋನಲ್ಲಿ ಭಾಗಿ ಆಗಿದ್ದರು. ಸಿನಿಮಾ ನೋಡಿದ ಬಳಿಕ, ‘ಚೆನ್ನಾಗಿ ಅಲ್ಲಾಡಿಸಿದ್ದೀನಾ’ ಎಂದು ಚಂದ್ರಣ್ಣನ ಬಳಿ ನಿರ್ದೇಶಕ ಸಿಂಪಲ್​ ಸುನಿ ಅವರು ಅಭಿಪ್ರಾಯ ಕೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..

ನಿರ್ದೇಶಕ ಸಿಂಪಲ್​ ಸುನಿ (Simple Suni) ಅವರು ಆ್ಯಕ್ಷನ್​-ಕಟ್​ ಹೇಳಿರುವ ‘ಒಂದು ಸರಳ ಪ್ರೇಮಕಥೆ’ (Ondu Sarala Prema Kathe) ಸಿನಿಮಾ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಒಂದು ಡಿಫರೆಂಟ್​ ಆದ ಲವ್​ಸ್ಟೋರಿ ಇದೆ. ವಿನಯ್ ರಾಜ್​ಕುಮಾರ್​, ಸ್ವಾದಿಷ್ಟಾ, ಮಲ್ಲಿಕಾ ಸಿಂಗ್​, ರಾಜೇಶ್​ ನಟರಂಗ, ಸಾಧು ಕೋಕಿಲ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸೋಮವಾರ (ಫೆಬ್ರವರಿ 12) ‘ಒಂದು ಸರಳ ಪ್ರೇಮಕಥೆ’ ಚಿತ್ರದ ಸೆಲೆಬ್ರಿಟಿ ಶೋ ಏರ್ಪಡಿಸಲಾಗಿತ್ತು. ಇದರಲ್ಲಿ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರಣ್ಣ (Bellulli Kabab Chandru) ಕೂಡ ಭಾಗಿ ಆಗಿದ್ದರು. ಸಿನಿಮಾ ಮುಗಿದ ಬಳಿಕ ‘ಚೆನ್ನಾಗಿ ಅಲ್ಲಾಡಿಸಿದ್ದೀನಾ’ ಎಂದು ಅವರ ಬಳಿ ಸಿಂಪಲ್ ಸುನಿ ಅಭಿಪ್ರಾಯ ಕೇಳಿದ್ದಾರೆ. ‘ತುಂಬ ಚೆನ್ನಾಗಿ ಅಲ್ಲಾಡಿಸಿದ್ದೀರಿ. ಈ ಸಿನಿಮಾದಲ್ಲಿ ಎರಡು ಕ್ಲೈಮ್ಯಾಕ್ಸ್​ ಇದೆ. ನಮ್ಮ ರಾಹುಲ್ಲಾ.. ಅಲ್ಲ.. ಸುನಿಲ್ಲಾ ತುಂಬ ಚೆನ್ನಾಗಿ ಮಾಡಿದ್ದಾರೆ. ನನ್ನ ಬೆಳ್ಳುಳ್ಳಿ ಕಬಾಬ್​ಗೆ ನೀಡಿದ ಬೆಂಬಲದ ರೀತಿಯೇ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ನೋಡ್ತಾ ಇರಬೇಕು, ಒನ್​ ಮೋರ್​ ಒನ್​ ಅಂತಾ ಇರಬೇಕು’ ಎಂದು ಚಂದ್ರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More