ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ಎಚ್ಚರ ತಪ್ಪಿದ್ರೆ ಹೊಳೆ ಪಾಲು, ವಿಡಿಯೋ ವೈರಲ್

| Updated By: ರಮೇಶ್ ಬಿ. ಜವಳಗೇರಾ

Updated on: Jul 07, 2024 | 3:40 PM

ಕರಾವಳಿಯಲ್ಲಿ ಮಳೆ ಅಬ್ಬರ ಜೋರಾಗಿದೆ. ಇದರಿಂದ ಜನಜೀವ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಹಳ್ಳ-ಕೊಳ್ಳ ನದಿಗಳು ಮೈದುಂಬಿ ಹರಿಯುತ್ತಿವೆ. ಇನ್ನು ಕೆಲವೆಡೆ ಸೇತುಗಳು ಮುಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಇದರ ಮಧ್ಯ ಗ್ರಾಮಸ್ಥರು ಕಿರು ದಾರಿಯಲ್ಲಿ ಕಷ್ಟ ಪಟ್ಟು ಹೆಣ ಸಾಗಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಹಾಗಾದ್ರೆ, ಇದು ನಡೆದಿದ್ದು ಎಲ್ಲಿ ಎನ್ನುವ ಮಾಹಿತಿ ಇಲ್ಲಿದೆ.

ಮಂಗಳೂರು, (ಜುಲೈ, 07): ಕರ್ನಾಟಕದಲ್ಲಿ ಮುಂಗಾರು ಮಳೆ ಜೋರಾಗಿದೆ. ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿ ಅಂತೂ ವರುಣ ಅಬ್ಬರಿಸುತ್ತಿದ್ದಾನೆ. ಕರಾವಳಿಯಲ್ಲಿ ಜನರನ್ನು ಮನೆಯಿಂದ ಆಚೆ ಬರದಂತೆ ಎಡಬಿಡದೇ ಮಳೆಯಾಗುತ್ತಿದೆ. ಇದರಿಂದ ಹಲವೆಡೆ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಇದರ ಮಧ್ಯ ದಕ್ಷಿಣ ಕನ್ನಡ ಜಿಲ್ಲೆಯ ಬೆಂಚಿನಡ್ಕ ಗ್ರಾಮ ಜನರು ಕಿರು ದಾರಿಯಲ್ಲಿ ಕಷ್ಟ ಪಟ್ಟು ಹೆಣ ಸಾಗಿಸಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ. ಇಲ್ಲಿನ ವೃದ್ಧೆಯೋರ್ವರ ಶವವನ್ನು ಕಿಂಡಿ ಅಣೆಕಟ್ಟಿನ ಕಾಲುದಾರಿಯಲ್ಲಿ ಪ್ರಯಾಸಪಟ್ಟು ಹೊತ್ತುಕೊಂಡು ಹೋಗಿದ್ದಾರೆ. ಬೆಂಚಿನಡ್ಕ–ಕಾಜಲ ಪ್ರದೇಶಗಳ ನಡುವೆ ಹರಿಯುವ ಹೊಳೆ. ಸ್ವಲ್ಪ ಎಚ್ಚರ ತಪ್ಪಿದರೂ ಹೊಳೆಗೆ ಬೀಳಿತ್ತಾರೆ ಅಷ್ಟು ಕಿರಿದಾದ ದಾರಿಯಲ್ಲಿ ಹೆಣ ಹೊತ್ತುಕೊಂಡು ಸಾಗಿದ್ದಾರೆ. ಸೇತುವೆ ನಿರ್ಮಾಣಕ್ಕಾಗಿ, ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಈ ರೀತಿಯಲ್ಲಿ ಕಷ್ಟ ಪಟ್ಟು ಸಂಚರಿಸಬೇಕಾದ ಪರಿಸ್ಥಿತಿ.

Follow us on