ಗೃಹಲಕ್ಷ್ಮಿ ಹಣದಲ್ಲಿ ಮನೆ ಬಾಗಿಲಿಗೆ ಸಿದ್ದರಾಮಯ್ಯ ಚಿತ್ರ ಕೆತ್ತಿಸಿದ ಫಲಾನುಭವಿ!

Updated By: ಭಾವನಾ ಹೆಗಡೆ

Updated on: Sep 19, 2025 | 12:58 PM

ಸಿಎಂ ಸಿದ್ದರಾಮಯ್ಯರ ಗೃಹಲಕ್ಷ್ಮಿ ಫಲಾನುಭವಿಗಳು ಹಲವಾರು ರೀತಿಯಲ್ಲಿ ಗೃಹಲಕ್ಷ್ಮಿ ಹಣವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಅದರಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ಪಾರ್ವತಿ 15 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಮನೆಗೆಯ ಮುಖ್ಯದ್ವಾರಕ್ಕೆ ಸಿಎಂ ಭಾವಚಿತ್ರವಿರುವ ಬಾಗಿಲು ಅಳವಡಿಸಿಕೊಂಡಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ.

ವಿಜಯನಗರ, ಸೆಪ್ಟೆಂಬರ್ 19 : ರಾಜ್ಯದಲ್ಲಿ ಗೃಹಲಕ್ಷ್ಮಿ ಹಣವನ್ನು ಮಹಿಳೆಯರು ಹಲವಾರು ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡಿರುವ ಉದಾಹರಣೆಗಳಿವೆ. ಕೆಲವರು ಪ್ರತಿ ತಿಂಗಳು ಸಿಗುವ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಚಿನ್ನಾಭರಣಗಳನ್ನು ಮಾಡಿಸಿಕೊಂಡರೆ, ಇನ್ನೂ ಕೆಲವರು ತಮ್ಮ ಮಕ್ಕಳಿಗಾಗಿ ಬೈಕ್ ಖರೀದಿಸಿದ ವಿಷಯ ಸುದ್ಧಿ ಮಾಡಿತ್ತು. ಆದರೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ಪಾರ್ವತಿ ತಮ್ಮ ಮನೆಗೆ ಸಿಎಂ ಭಾವಚಿತ್ರ ಕೆತ್ತಿಸಿರುವ ಬಾಗಿಲು ಅಳವಡಿಸಿಕೊಂಡಿದ್ದಾರೆ. ತಮ್ಮ 15 ತಿಂಗಳುಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ತಮ್ಮ ಮನೆಯ ಮುಖ್ಯದ್ವಾರಕ್ಕೆ  ಸಿಎಂ ಸಿದ್ದರಾಮಯ್ಯ ಭಾವಚಿತ್ರದ ಕೆತ್ತನೆ ಮಾಡಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯಗೆ ವಿನೂತನ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಮುಖ್ಯದ್ವಾರ ವೀಕ್ಷಣೆಗಾಗಿ ಪಕ್ಕದ ಊರಿನಿಂದ ಜನ ಆಗಮಿಸುತ್ತಿದ್ದಾರೆ. ಅದರ ದೃಶ್ಯಾವಳಿಗಳು ಇಲ್ಲಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 19, 2025 10:16 AM