ಆಯುಧಪೂಜೆಗೆ ಖರೀದಿ ಜೋರು: ಬೆಲೆ ಏರಿಕೆ ಮಧ್ಯೆಯೂ ಮಾರುಕಟ್ಟೆಗೆ ದಾಂಗುಡಿಯಿಟ್ಟ ಜನ
ಆಯುಧಪೂಜೆ ಹಿನ್ನೆಲೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿದೆ. ಸಾವಿರಾರು ಜನರು ಬೆಳ್ಳಂಬೆಳಿಗ್ಗೆ ಖರೀದಿಗೆ ಮುಂದಿದ್ದರು. ಜನ ಸಂದಣಿಯಿಂದಾಗಿ ಟೌನ್ ಹಾಲ್‌ನಿಂದ ಕೆ.ಆರ್. ಮಾರುಕಟ್ಟೆವರೆಗೆ ಸಂಚಾರ ದಟ್ಟಣೆ ಉಂಟಾಗಿದೆ. ಫ್ಲೈಓವರ್ ಮೇಲೆ ವಾಹನಗಳನ್ನು ನಿಲ್ಲಿಸಲಾಗಿದೆ. ವಿಡಿಯೋ ನೋಡಿ.
ಬೆಂಗಳೂರು, ಅಕ್ಟೋಬರ್ 01: ಇಂದು ಎಲ್ಲೆಡೆ ನವರಾತ್ರಿ ಆಯುಧ ಪೂಜೆ (Ayudha Puja) ಸಂಭ್ರಮ. ಹೀಗಾಗಿ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಬೆಲೆ ಏರಿಕೆ ಮಧ್ಯೆ ಜನರು ಹೂವು, ಹಣ್ಣು, ತರಕಾರಿ, ಪೂಜಾ ಸಾಮಾಗ್ರಿ ಖರೀದಿಸುತ್ತಿದ್ದಾರೆ. ಕೆ.ಆರ್.ಮಾರುಕಟ್ಟೆಗೆ ಬರುವವರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಟೌನ್ ಹಾಲ್‌ನಿಂದ ಕೆ.ಆರ್.ಮಾರುಕಟ್ಟೆವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಫ್ಲೈಓವರ್ ಮೇಲೂ ಸಾರ್ವಜನಿಕರು ವಾಹನ ಪಾರ್ಕ್ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 01, 2025 07:42 AM
Latest Videos
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ

