ಬೆಂಗಳೂರಿನಲ್ಲಿ ನಿಲ್ಲದ ಡ್ರ್ಯಾಗ್ ರೇಸ್ ಹಾಗೂ ಸ್ಟಂಟ್‌ಗಳ ಹುಚ್ಚಾಟ! ವಿಡಿಯೋ ವೈರಲ್

Updated on: Apr 17, 2026 | 3:04 PM

ನಗರದಲ್ಲಿ ಡ್ರ್ಯಾಗ್ ರೇಸ್ ಹಾಗೂ ಸ್ಟಂಟ್‌ಗಳ ಹುಚ್ಚಾಟ ಮುಂದುವರಿದಿದ್ದು, ಟ್ರಾಫಿಕ್ ಪೊಲೀಸರ ಕ್ರಮಕ್ಕೂ ಲೆಕ್ಕಿಸದೆ ಪುಂಡರು ಅಟ್ಟಹಾಸ ಮೆರೆಯುತ್ತಿದ್ದಾರೆ. ಗುರುವಾರ ರಾತ್ರಿ ಸುಮಾರು 9:30ರ ವೇಳೆಗೆ ಡೈರಿ ಸರ್ಕಲ್‌ನಿಂದ ಜಯದೇವ ಆಸ್ಪತ್ರೆ ಕಡೆ ಸಾಗುವ ರಸ್ತೆಯಲ್ಲಿ ಕಾರೊಂದನ್ನು ವೇಗವಾಗಿ ಓಡಿಸಿದ ಚಾಲಕ ಭಾರೀ ಶಬ್ದ ಮಾಡುವ ಮೂಲಕ ಸಾರ್ವಜನಿಕರಿಗೆ ಆತಂಕ ಉಂಟುಮಾಡಿದ್ದಾನೆ. ಮೊಡಿಫೈಡ್ ಸೈಲೆನ್ಸರ್‌ನಿಂದ ಬೆಂಕಿ ಹೊರಬರುವ ದೃಶ್ಯ ಕಂಡುಬಂದಿದ್ದು, ಅಕ್ಕಪಕ್ಕದ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು, ಏಪ್ರಿಲ್ 17: ನಗರದಲ್ಲಿ ಡ್ರ್ಯಾಗ್ ರೇಸ್ ಹಾಗೂ ಸ್ಟಂಟ್‌ಗಳ ಹುಚ್ಚಾಟ ಮುಂದುವರಿದಿದ್ದು, ಟ್ರಾಫಿಕ್ ಪೊಲೀಸರ ಕ್ರಮಕ್ಕೂ ಲೆಕ್ಕಿಸದೆ ಪುಂಡರು ಅಟ್ಟಹಾಸ ಮೆರೆಯುತ್ತಿದ್ದಾರೆ. ಗುರುವಾರ ರಾತ್ರಿ ಸುಮಾರು 9:30ರ ವೇಳೆಗೆ ಡೈರಿ ಸರ್ಕಲ್‌ನಿಂದ ಜಯದೇವ ಆಸ್ಪತ್ರೆ ಕಡೆ ಸಾಗುವ ರಸ್ತೆಯಲ್ಲಿ ಕಾರೊಂದನ್ನು ವೇಗವಾಗಿ ಓಡಿಸಿದ ಚಾಲಕ ಭಾರೀ ಶಬ್ದ ಮಾಡುವ ಮೂಲಕ ಸಾರ್ವಜನಿಕರಿಗೆ ಆತಂಕ ಉಂಟುಮಾಡಿದ್ದಾನೆ. ಮೊಡಿಫೈಡ್ ಸೈಲೆನ್ಸರ್‌ನಿಂದ ಬೆಂಕಿ ಹೊರಬರುವ ದೃಶ್ಯ ಕಂಡುಬಂದಿದ್ದು, ಅಕ್ಕಪಕ್ಕದ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Apr 17, 2026 03:01 PM
Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More