AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ: ಹಂತಕನಿಂದ 11 ವರ್ಷದ ಬಾಲಕ ಬದುಕುಳಿದಿದ್ದೇ ರೋಚಕ

ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ: ಹಂತಕನಿಂದ 11 ವರ್ಷದ ಬಾಲಕ ಬದುಕುಳಿದಿದ್ದೇ ರೋಚಕ

ರಮೇಶ್ ಬಿ. ಜವಳಗೇರಾ
|

Updated on: Nov 06, 2026 | 3:04 PM

Share

ಬೆಂಗಳೂರಿನಲ್ಲಿ 7 ಜನರ ಹತ್ಯಾಕಾಂಡ ಬೆಚ್ಚಿ ಬೀಳಿಸಿದೆ. ಪೈಶಾಚಿಕ ಕೃತ್ಯವೆಸಗಿದ ಕ್ಯಾಬ್‌ ಚಾಲಕ ಇಂದುಶೇಖರ್‌ ನರಮೇಧಕ್ಕೆ ಅಕ್ಟೋಬರ್ 16ರಂದೇ ಮುನ್ನುಡಿ ಬರೆದಿದ್ದ. ಮೊದಲು ಪತ್ನಿ ಸುನಿತಾಳನ್ನು ಕೊಲೆ ಮಾಡಿದ್ದ. ನಂತರ ರೂಪವತಿಯನ್ನ ಕೊಲೆ ಮಾಡಿದ್ದ. ಬಳಿಕ ದಿವ್ಯ, ಶಿವಕುಮಾರ್ ಮತ್ತು ಅವರ ಮಗ ಪುನೀತ್ ಕೊಲೆ ಮಾಡಿದ್ದ. ನಾಲ್ಕನೆಯದಾಗಿ ದಿವ್ಯ ಮತ್ತು‌ ಶಿವಕುಮಾರ್​​ನನ್ನು ಹತ್ಯೆ ಮಾಡಿದ್ದಾನೆ. ಕೊನೆಯದಾಗಿ ನಳಿನಿ ಮತ್ತು ಶಂಕರ್ ಹತ್ಯೆಗೈದಿದ್ದ. ಅದೃಷ್ಟವಶಾತ್‌ ಅವರ ಜೊತೆ ಬಂದಿದ್ದ 10 ವರ್ಷದ ಮಗ ಬದುಕುಳಿದಿದ್ದಾನೆ. ಹೌದು....ಕೊಲೆಯಾದ ನಳಿನಿ ಹಾಗೂ ಶಂಕರ್ ದಂಪತಿಯ​ ಪುತ್ರ ಬದುಕುಳಿದಿದ್ದಾನೆ.

ಬೆಂಗಳೂರು, ನವೆಂಬರ್ 06): ಬೆಂಗಳೂರಿನಲ್ಲಿ 7 ಜನರ ಹತ್ಯಾಕಾಂಡ ಬೆಚ್ಚಿ ಬೀಳಿಸಿದೆ. ಪೈಶಾಚಿಕ ಕೃತ್ಯವೆಸಗಿದ ಕ್ಯಾಬ್‌ ಚಾಲಕ ಇಂದುಶೇಖರ್‌ ನರಮೇಧಕ್ಕೆ ಅಕ್ಟೋಬರ್ 16ರಂದೇ ಮುನ್ನುಡಿ ಬರೆದಿದ್ದ. ಮೊದಲು ಪತ್ನಿ ಸುನಿತಾಳನ್ನು ಕೊಲೆ ಮಾಡಿದ್ದ. ನಂತರ ರೂಪವತಿಯನ್ನ ಕೊಲೆ ಮಾಡಿದ್ದ. ಬಳಿಕ ದಿವ್ಯ, ಶಿವಕುಮಾರ್ ಮತ್ತು ಅವರ ಮಗ ಪುನೀತ್ ಕೊಲೆ ಮಾಡಿದ್ದ. ನಾಲ್ಕನೆಯದಾಗಿ ದಿವ್ಯ ಮತ್ತು‌ ಶಿವಕುಮಾರ್​​ನನ್ನು ಹತ್ಯೆ ಮಾಡಿದ್ದಾನೆ. ಕೊನೆಯದಾಗಿ ನಳಿನಿ ಮತ್ತು ಶಂಕರ್ ಹತ್ಯೆಗೈದಿದ್ದ. ಅದೃಷ್ಟವಶಾತ್‌ ಅವರ ಜೊತೆ ಬಂದಿದ್ದ 10 ವರ್ಷದ ಮಗ ಬದುಕುಳಿದಿದ್ದಾನೆ. ಹೌದು….ಕೊಲೆಯಾದ ನಳಿನಿ ಹಾಗೂ ಶಂಕರ್ ದಂಪತಿಯ​ ಪುತ್ರ ಬದುಕುಳಿದಿದ್ದಾನೆ.

ಕರೆ ಮಾಡಿದ್ರೆ ಮಾತಾಡಲು ಬೇಕೆಂದು ಬಾಲಕನನ್ನು ಉಳಿಸಿದ್ದ. ನಳಿನಿ ಹಾಗೂ ಶಂಕರ್ ಕೊಂದು ಬಳಿಕ ಚೀಲದಲ್ಲಿ ತುಂಬಿಕೊಂಡು ಕಾರಿನಲ್ಲಿ ತೆಗೆದುಕೊಂಡು ಹೋಗಿ ಶಿರಾಡಿಘಾಟ್​ನಲ್ಲಿ ಎಸೆದಿದ್ದ. ಅಚ್ಚರಿ ಅಂದ್ರೆ, ನಳಿನಿ ಹಾಗೂ ಶಂಕರ್ ಮೃತದೇಹಳನ್ನು ಕಾರಿನಲ್ಲಿ ಬಾಲಕನ ಜೊತೆ ಸಾಗಿಸಿದ್ದ. ಆ ವೇಳೆ ಏನಿದೆ ಎಂದು ಬಾಲಕ ಕೇಳಿದಾಗ ಕಸದ ಚೀಲ ಎಂದು ಕರೆದೊಯ್ದು ಇಬ್ಬರ ಶವ ಶಿರಾಡಿಘಾಟ್​ನಲ್ಲಿ ಎಸೆದು ಬಾಲಕನ ಜೊತೆ ವಾಪಸ್​ ಆಗಿದ್ದ. ಮನೆ ತಲುಪಿದ ಮೇಲೆ ಬಾಲಕನ ಕೊಲೆ ಮಾಡಲು ನಿರ್ಧರಿಸಿದ್ದ. ಆದ್ರೆ ಅಷ್ಟೊತ್ತಿಗೆ ಹಂತಕ ಇಂದುಶೇಖರ್, ಪೊಲೀಸರ ಕೈಲಿ ಸಿಕ್ಕಿಬಿದ್ದಿದ್ದಾನೆ.

ಕರ್ನಾಕಟ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More