AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಒಂದೇ ಕುಟುಂಬ 7 ಜನರ ಹತ್ಯೆ: ಮೃತ ದೇಹಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ

ಬೆಂಗಳೂರಿನಲ್ಲಿ ಒಂದೇ ಕುಟುಂಬ 7 ಜನರ ಹತ್ಯೆ: ಮೃತ ದೇಹಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ

ರಮೇಶ್ ಬಿ. ಜವಳಗೇರಾ
|

Updated on: Nov 06, 2026 | 5:57 PM

Share

ರಾಜ್ಯ ರಾಜಧಾನಿ ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ ಸಮೀಪದ ಮನೆಯೊಂದರಲ್ಲಿ ಮಹಾ ಹತ್ಯಾಕಾಂಡವೊಂದು ನಡೆದು ಹೋಗಿದೆ. ಹೆಂಡತಿ ಮೇಲಿನ ಕೋಪ, ಅತ್ತೆ ಮನೆಯವರ ಮೇಲಿನ ದ್ವೇಷ ಒಂದೇ ಕುಟುಂಬದ ಏಳು ಮಂದಿಯ ಜೀವವನ್ನೇ ಬಲಿಪಡೆದಿದೆ. ಹೌದು... ಪತ್ನಿ, ಅತ್ತೆ, ಇಬ್ಬರು ಬಾಮೈದರು, ಇಬ್ಬರು ನಾದಿನಿಯರು, ಏಳು ವರ್ಷದ ಪುಟ್ಟ ಬಾಲಕನನ್ನು ಇಂದುಶೇಖರ್ ಹತ್ಯೆ ಮಾಡಿದ್ದಾನೆ. ರಾಕ್ಷಸ 20 ದಿನಗಳ ಅಂತರಲ್ಲಿ ಬರೋಬ್ಬರಿ 7 ಮಂದಿಯನ್ನು ಕೊಂದು ಮುಗಿಸಿ ಬಿಟ್ಟಿದ್ದಾನೆ.

ಬೆಂಗಳೂರು, (ನವೆಂಬರ್ 6): ರಾಜ್ಯ ರಾಜಧಾನಿ ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ ಸಮೀಪದ ಮನೆಯೊಂದರಲ್ಲಿ ಮಹಾ ಹತ್ಯಾಕಾಂಡವೊಂದು ನಡೆದು ಹೋಗಿದೆ. ಹೆಂಡತಿ ಮೇಲಿನ ಕೋಪ, ಅತ್ತೆ ಮನೆಯವರ ಮೇಲಿನ ದ್ವೇಷ ಒಂದೇ ಕುಟುಂಬದ ಏಳು ಮಂದಿಯ ಜೀವವನ್ನೇ ಬಲಿಪಡೆದಿದೆ. ಹೌದು… ಪತ್ನಿ, ಅತ್ತೆ, ಇಬ್ಬರು ಬಾಮೈದರು, ಇಬ್ಬರು ನಾದಿನಿಯರು, ಏಳು ವರ್ಷದ ಪುಟ್ಟ ಬಾಲಕನನ್ನು ಇಂದುಶೇಖರ್ ಹತ್ಯೆ ಮಾಡಿದ್ದಾನೆ. ರಾಕ್ಷಸ 20 ದಿನಗಳ ಅಂತರಲ್ಲಿ ಬರೋಬ್ಬರಿ 7 ಮಂದಿಯನ್ನು ಕೊಂದು ಮುಗಿಸಿ ಬಿಟ್ಟಿದ್ದಾನೆ.

ಊಟಕ್ಕೆ ಕರೆಸಿ, ಮತ್ತು ಬರಿಸೋ ಮಾತ್ರೆ ಕೊಟ್ಟು, ಪ್ರಜ್ಞೆ ತಪ್ಪಿದವರನ್ನ ರುಬ್ಬೋ ಕಲ್ಲಿನಿಂದ ಜಜ್ಜಿ ಕೊಂದಿದ್ದಾನೆ. ಕೊಲೆ ಮಾಡಿದ ಬಳಿಕವೂ ಈತನ ಕ್ರೌರ್ಯ ನಿಂತಿರಲಿಲ್ಲ. ಮೃತದೇಹಗಳನ್ನ ಚೀಲಗಳಲ್ಲಿ ತುಂಬಿ, ಬೆಟ್ಟಗುಡ್ಡಗಳಲ್ಲಿ ಎಸೆದಿದ್ದಾನೆ. ಇನ್ನು ಮೃತದೇಹಗಳನ್ನು ಕಾರಿನಲ್ಲಿ ಸಾಗಿಸುತ್ತಿರುವ ಸಿಸಿಟಿವಿ ದೃಶ್ಯ ಟಿವಿ9ಗೆ ಲಭ್ಯವಾಗಿದೆ.

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More