ಒಂದೇ ಕುಟುಂಬದ 7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
ಬೆಂಗಳೂರಿನಲ್ಲಿ ನಡೆದ ಭೀಕರ ಸಾಮೂಹಿಕ ಹತ್ಯಾಕಾಂಡದ ಕುರಿತು ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ ಪ್ರತಿಕ್ರಿಯಿಸಿದ್ದಾರೆ. ಮಾನಸಿಕ ಅಸ್ವಸ್ಥತೆ, ಹೊಂದಾಣಿಕೆ ಸಮಸ್ಯೆಗಳು ಅಥವಾ ವ್ಯಸನಗಳು ಇಂತಹ ಕೃತ್ಯಗಳಿಗೆ ಕಾರಣವಾಗಬಹುದು. ವ್ಯಕ್ತಿಯಲ್ಲಿರುವ ಉದ್ವೇಗ, ಬಾಲ್ಯದ ವರ್ತನೆಗಳು, ಪ್ರತೀಕಾರದ ಪ್ರವೃತ್ತಿ ಮತ್ತು ಮೌಲ್ಯಗಳ ಕೊರತೆ ಪ್ರಮುಖ ಅಂಶಗಳು.
ಬೆಂಗಳೂರು, ನವೆಂಬರ್ 06: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ, ಮಹಾ ಹತ್ಯಾಕಾಂಡವೊಂದು ನಡೆದು ಹೋಗಿದೆ. ಹೆಂಡತಿ ಮೇಲಿನ ಕೋಪ, ಅತ್ತೆ ಮನೆಯವರ ಮೇಲಿನ ದ್ವೇಷಕ್ಕೆ ಇಂದುಶೇಖರ್ ಎಂಬಾತ ಒಂದೇ ಕುಟುಂಬದ ಏಳು ಮಂದಿಯ ಜೀವವನ್ನೇ ಬಲಿಪಡೆದಿದ್ದಾನೆ. ಈ ಘಟನೆಯ ಬಗ್ಗೆ ಮನೋವೈದ್ಯ ಮತ್ತು ಧಾರವಾಡ ಡಿಮ್ಹಾನ್ಸ್ ಪ್ರಾಧ್ಯಾಪಕ ಡಾ. ಆದಿತ್ಯ ಪಾಂಡುರಂಗಿ ಪ್ರತಿಕ್ರಿಯಿಸಿದ್ದು, ‘ಇಂತಹ ಘಟನೆಗಳು ಮಾನಸಿಕ ಕಾಯಿಲೆಗಳಿಂದ ಅಥವಾ ಹೊಂದಾಣಿಕೆ ಸಮಸ್ಯೆಗಳಿಂದ ಉದ್ಭವಿಸಬಹುದು. ಕೆಲವೊಮ್ಮೆ ವ್ಯಸನಗಳು ಸಹ ಇಂತಹ ಕ್ರೂರ ಕೃತ್ಯಗಳಿಗೆ ಪ್ರೇರೇಪಿಸಬಹುದು. ಶೇಖರ್‌ನಂತಹ ವ್ಯಕ್ತಿಗಳು ಬಾಲ್ಯದಿಂದಲೇ ಉದ್ವೇಗದ ಸ್ವಭಾವ ಹೊಂದಿರಬಹುದು ಅಥವಾ ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡಿಕೊಂಡು ಪ್ರತೀಕಾರ ತೀರಿಸಿಕೊಳ್ಳುವ ಪ್ರವೃತ್ತಿ ಹೊಂದಿರಬಹುದು. ವ್ಯಕ್ತಿಗೆ ಮೌಲ್ಯಗಳನ್ನು ಕಲಿಸುವುದು ಮತ್ತು ಜವಾಬ್ದಾರಿಗಳ ಅರಿವು ಮೂಡಿಸುವುದರಿಂದ ಸಮಾಜದಲ್ಲಿ ಇಂತಹ ಘಟನೆಗಳನ್ನು ತಡೆಯಲು ಸಹಕಾರಿ’ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.