ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು?: ಇಲ್ಲಿದೆ Exclusive ವಿಡಿಯೋ
ನವೆಂಬರ್ 1ರಂದು ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ಸಿಗಲಿದ್ದು, ಬಿಇಎಂಎಲ್ ನಿರ್ಮಿತ ಈ ಹೈಟೆಕ್ ರೈಲು ಪ್ರಯಾಣದ ಅವಧಿಯನ್ನು 16 ಗಂಟೆಗಳಿಗೆ ತಗ್ಗಿಸಲಿದೆ. ಒಟ್ಟು 16 ಕೋಚ್ಗಳನ್ನು ಹೊಂದಿರುವ ರೈಲು, 823 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಅಷ್ಟಕ್ಕೂ ಈ ನೂತನ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ ಎಂಬುದ ಪ್ರತ್ಯಕ್ಷ ವರದಿ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 26: ನವೆಂಬರ್ 1ರಂದು ಬಹುನಿರೀಕ್ಷಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ಸಿಗಲಿದ್ದು, ಇದು ದಕ್ಷಿಣ ಭಾರತದ ಮೊದಲ ಮತ್ತು ದೇಶದ ಎರಡನೇ ಹೈಟೆಕ್ ರೈಲಾಗಿದೆ. ಈ ರೈಲಿನಲ್ಲಿ ಮೂರು ಟೈರ್ 11, ಎರಡು ಟೈರ್ನ 4, ಫಸ್ಟ್ ಎಸಿ 1 ಸೇರಿದಂತೆ ಒಟ್ಟು 16 ಕೋಚ್ಗಳಿವೆ. 823 ಪ್ರಯಾಣಿಕರ ಸಾಮರ್ಥ್ಯವನ್ನು ಇದು ಹೊಂದಿದ್ದು, ರೈಲು ಬೆಂಗಳೂರಿನ ಬಿಇಎಂಎಲ್ನಲ್ಲಿ ನಿರ್ಮಾಣವಾಗಿರುವುದು ಮತ್ತೊಂದು ವಿಶೇಷವಾಗಿದೆ. ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ನಡುವೆ ಇದು ಸಂಚಾರ ಮಾಡಲಿದ್ದು, ಪ್ರಯಾಣದ ಅವಧಿ ಸುಮಾರು 16 ಗಂಟೆಗಳಾಗಿರಲಿವೆ. ಅಷ್ಟಕ್ಕೂ ಈ ನೂತನ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಹೇಗಿದೆ ಎಂಬುದ ಪ್ರತ್ಯಕ್ಷ ವರದಿ ಇಲ್ಲಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 26, 2026 01:59 PM
Loading...
Unable to load recommendations.
Follow Us
