Namma Metro: ಹಳದಿ ಮಾರ್ಗದ ಚಾಲಕ ರಹಿತ ಮೆಟ್ರೋ ಟ್ರಯಲ್ ರನ್ ಆರಂಭ
Bengaluru Namma Metro: ಬೆಂಗಳೂರು ಜನರಿಗೆ ವೇಗದ ಮತ್ತು ಸುಖಕರ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಸಹಾಯಕಾರಿಯಾಗಿದೆ. ಹೀಗಾಗಿ ಬೆಂಗಳೂರಿನ ಜನ ತಮ್ಮ ಸ್ವಂತ ವಾಹನ ಬಿಟ್ಟು ಮೆಟ್ರೋದಲ್ಲಿ ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ನಗರ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಹಳದಿ ಮಾರ್ಗ ಪ್ರಾರಂಭಿಸಲಾಗುತ್ತಿದೆ. ಹಳದಿ ಮಾರ್ಗದ ಟ್ರಾಯಲ್ ಟೆಸ್ಟ್ ಆರಂಭವಾಗಿದೆ.
ಬೆಂಗಳೂರು, ಜೂನ್ 14: ಟ್ರಾಫಿಕ್ ಸಾಗರದಿಂದ ಬಳಲಿರುವ ಸಿಲಿಕಾನ್ ಸಿಟಿ ಮಂದಿ ಇದೀಗ ಮೆಟ್ರೋ ಮೊರೆ ಹೋಗಿದ್ದಾರೆ. ದಿನದಿಂದ ದಿನಕ್ಕೆ ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಬಿಎಂಆರ್ಸಿಎಲ್ (BMRCL) ಕೂಡ ಸಿಟಿಯ ಅಷ್ಟ ದಿಕ್ಕುಗಳಿಗೂ ಮೆಟ್ರೋ ಸಂಪರ್ಕ ಕಲ್ಪಿಸುವ ಕೆಲಸ ಮಾಡ್ತಿದೆ. ಮೆಟ್ರೋದಲ್ಲಿ ಒಂದು ದಿನಕ್ಕೆ ಲಕ್ಷಾಂತರ ಜನ ಸಂಚರಿಸುತ್ತಿದ್ದಾರೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಸುಮಾರ್ 18.82 ಕಿಮೀ ಹಳದಿ ಮಾರ್ಗ ವರ್ಷದ ಅಂತ್ಯದ ವೇಳೆಗೆ ಆರಂಭವಾಗಲಿದೆ.
ಬಹುನಿರೀಕ್ಷಿತ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಟ್ರಯಲ್ ಪ್ರಾರಂಭವಾಗಿದೆ. ಚಾಲಕ ರಹಿತ ಮೆಟ್ರೋ ರೈಲುಗಳ ಪರೀಕ್ಷೆಗಳು ಆರಂಭವಾಗಿವೆ. ಮೆಟ್ರೋ ಅಧಿಕಾರಿಗಳು ಗುರುವಾರ (ಜೂ.13) ರಂದು ಇಂಟಿಗ್ರೇಷನ್ ಟೆಸ್ಟಿಂಗ್ ಮತ್ತು ಬ್ರೇಕಿಂಗ್ ಟೆಸ್ಟ್ಗಳನ್ನು ನಡೆಸಿದರು. ಟ್ರಯಲ್ ರನ್ ಬಳಿಕ ಸಿಗ್ನಲಿಂಗ್, ದೂರಸಂಪರ್ಕ ಹಾಗೂ ವಿದ್ಯುತ್ ಪರೀಕ್ಷೆಗಳು ನಡೆಯಲಿವೆ. ವಿವಿಧ ರೀತಿಯ ಪರೀಕ್ಷೆಗಳು ಮೂರು ತಿಂಗಳುಗಳ ಕಾಲ ನಡೆಯಲಿವೆ. ಎಲ್ಲ ರೀತಿಯ ಪರೀಕ್ಷೆಗಳು ಮುಗಿದ ನಂತರ ಸುರಕ್ಷತಾ ಪರೀಕ್ಷೆ ನಡೆಸುತ್ತದೆ. ಎಲ್ಲ ಪರೀಕ್ಷೆ ಪಾಸ್ ಆದ ಬಳಿಕ ಬಿಎಂಆರ್ಸಿಎಲ್ ವರದಿ ಸಿದ್ದಪಡಿಸಿ ಕೇಂದ್ರ ರೈಲ್ವೆ ಮಂಡಳಿಗೆ ವರದಿ ನೀಡಲಿದೆ. ಕೇಂದ್ರ ರೈಲ್ವೆ ಮಂಡಳಿ ಅಧಿಕಾರಿಗಳು ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡಲಿದ್ದಾರೆ. ಹಳದಿ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ಸ್ಟೇಷನ್ಗಳಿವೆ.
ಇದನ್ನೂ ಓದಿ: ನಮ್ಮ ಮೆಟ್ರೋ ಭಾನುವಾರ 7ರ ಬದಲಿಗೆ 6 ಗಂಟೆಯಿಂದಲೇ ಆರಂಭ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ