ಕಬಾಬ್ ಸೆಂಟರ್‌ಗೆ ನುಗ್ಗಿದ ಪಜೆರೋ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

Edited By:

Updated on: Nov 03, 2026 | 12:06 PM

ಬನ್ನೇರುಘಟ್ಟದ ಹೊಮ್ಮದೇವನಹಳ್ಳಿಯಲ್ಲಿ ಸಜೀನಾ ಬೇಗಂ ಚಲಾಯಿಸುತ್ತಿದ್ದ ಪಜೆರೋ ಕಾರು ಕಬಾಬ್ ಸೆಂಟರ್‌ಗೆ ನುಗ್ಗಿ ಮೂವರು ಗಾಯಗೊಂಡಿದ್ದಾರೆ. ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

ಬೆಂಗಳೂರು , ನ.3: ಸಿನಿಮಾದಲ್ಲಿ ಬರುವ ಭೀಕರ ಅಪಘಾತದ ದೃಶ್ಯಗಳನ್ನೂ ಮೀರಿಸುವಂತಹ ಭೀಕರ ರಸ್ತೆ ಅಪಘಾತವೊಂದು ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಸಂಭವಿಸಿದೆ. ಅತಿವೇಗವಾಗಿ ಬಂದ ಐಷಾರಾಮಿ ಕಾರೊಂದು ನಿಯಂತ್ರಣ ತಪ್ಪಿ ಸಾಲು ಸಾಲು ಬೈಕ್‌ಗಳಿಗೆ ಗುದ್ದಿ, ಬಳಿಕ ಕಬಾಬ್ ಸೆಂಟರ್‌ಗೆ ನುಗ್ಗಿದ ಬೆಚ್ಚಿಬೀಳಿಸುವ ಘಟನೆ ಬನ್ನೇರುಘಟ್ಟ ಸಮೀಪದ ಹೊಮ್ಮದೇವನಹಳ್ಳಿಯಲ್ಲಿ ನಡೆದಿದೆ. ಕಳೆದ ತಿಂಗಳು (ಅಕ್ಟೋಬರ್) 28 ರಂದು ನಡೆದ ಈ ಡೆಡ್ಲಿ ಆಕ್ಸಿಡೆಂಟ್‌ನ ರೋಮಾಂಚನಕಾರಿ ಹಾಗೂ ಭಯಾನಕ ದೃಶ್ಯಗಳು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಜೀನಾ ಬೇಗಂ ಎಂಬಾಕೆ ಚಲಾಯಿಸುತ್ತಿದ್ದ KA05-MR-3925 ನೋಂದಣಿ ಸಂಖ್ಯೆಯ ಪಜೆರೋ ಸ್ಪೋರ್ಟ್ಸ್ (Pajero Sports) ಐಷಾರಾಮಿ ಕಾರು ಅತಿವೇಗವಾಗಿ ಬಂದು ಚಾಲಕಿಯ ನಿಯಂತ್ರಣ ತಪ್ಪಿದೆ. ರಸ್ತೆ ಬದಿ ಸಾಲಾಗಿ ನಿಲ್ಲಿಸಲಾಗಿದ್ದ ಬೈಕ್‌ಗಳಿಗೆ ಭೀಕರವಾಗಿ ಗುದ್ದಿದ ಕಾರು, ನೇರವಾಗಿ ರಸ್ತೆ ಬದಿಯಿದ್ದ ‘ಹಳೇವೂರಮ್ಮ ಕಬಾಬ್ ಸೆಂಟರ್’ಗೆ ನುಗ್ಗಿದೆ. ಕಾರು ನುಗ್ಗಿದ ರಭಸಕ್ಕೆ ಅಂಗಡಿಯಲ್ಲಿದ್ದ ವಸ್ತುಗಳು, ಟೇಬಲ್‌ಗಳು ಚೆಲ್ಲಾಪಿಲ್ಲಿಯಾಗಿದ್ದು, ಕಬಾಬ್ ಕರಿಯಲು ಇಟ್ಟಿದ್ದ ಕಾದ ಎಣ್ಣೆ ಮೇಲಕ್ಕೆ ಚಿಮ್ಮಿದೆ. ಅಪಘಾತದ ವೇಳೆ ಕಬಾಬ್ ಸೆಂಟರ್‌ನಲ್ಲಿದ್ದ ಮೂವರ ಮೇಲೆ ಕಾದ ಎಣ್ಣೆ ಬಿದ್ದು ತೀವ್ರ ಸುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಬಸವರಾಜ್, ಮುನಿಕೃಷ್ಣ ಹಾಗೂ ಮಂಜೇಶ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಎಸಗಿದ ಚಾಲಕಿ ಸಜೀನಾ ಬೇಗಂ ಅವರನ್ನು ಹಾಗೂ ಆಕೆಯ ಪಜೆರೋ ಕಾರನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕಿಯ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 03, 2026 12:04 PM
Loading...
Unable to load recommendations.
Follow Us
ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More