ಬೆಂಗಳೂರು: ಕುಖ್ಯಾತ ಮೊಬೈಲ್ ಫೋನ್ ಕಳ್ಳರ ಬಂಧನ, ಪೊಲೀಸ್ ವಶಕ್ಕೆ ರೂ. 30 ಲಕ್ಷ ಮೌಲ್ಯದ ಫೋನ್​ಗಳು!

TV9kannada Web Team

TV9kannada Web Team | Edited By: Arun Belly

Updated on: Dec 01, 2022 | 1:56 PM

ಬಂಧಿತರಿಂದ ರೂ. 30 ಲಕ್ಷ ಮೌಲ್ಯದ 204 ಮೊಬೈಲ್ ಫೋನ್​ಗಳು ಮತ್ತು ಎರಡು ಹರಿತವಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು: ಬೈಕ್ ನಲ್ಲಿ ಚಲಿಸುತ್ತಾ ದಾರಿಹೋಕರ ಮೊಬೈಲ್ ಫೋನ್ ಗಳನ್ನು (mobile phones) ಅತ್ಯಂತ ಚಾಣಾಕ್ಷತೆಯಿಂದ ಕಿತ್ತುಕೊಳ್ಳುತ್ತಿದ್ದ ಮೂವರು ನೋಟೋರಿಯಸ್ ಕಳ್ಳರನ್ನು (thieves) ಬೆಂಗಳೂರಿನ ವಿಜಯನಗರದ (Vijayanagar a) ಪೊಲೀಸರು ಬಲೆಗೆ ಕೆಡವಿದ್ದಾರೆ. ಈ ವಿಡಿಯೋದಲ್ಲಿ ಮೂವರು ಪೈಕಿ ಇಬ್ಬರು ಕಳ್ಳರ ಕೈಚಳಕ ನೀವು ನೋಡಬಹುದು. ಬಂಧಿತರನ್ನು ಸಜ್ಜಾದ್ ಖಾನ್, ರಿಜ್ವಾನ್ ಪಾಶಾ ಮತ್ತು ತಬ್ರೇಜ್ ಖಾನ್ ಎಂದು ಗುರುತಿಸಲಾಗಿದ್ದು ಅವರಿಂದ ರೂ. 30 ಲಕ್ಷ ಮೌಲ್ಯದ 204 ಮೊಬೈಲ್ ಫೋನ್ ಗಳು ಮತ್ತು ಎರಡು ಹರಿತವಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada