ಅಕ್ರಮ ಆನ್​ಲೈನ್ ಬೆಟ್ಟಿಂಗ್: ಗೇಮಿಂಗ್ ಕಂಪನಿ ಧ್ವಂಸ ಮಾಡಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು

Edited By:

Updated on: Oct 05, 2025 | 4:54 PM

ಬೆಂಗಳೂರಿನ ಕೋರಮಂಗಲದಲ್ಲಿರುವ ಗೋಲ್ಡನ್ ಏಸಸ್ ಆನ್‌ಲೈನ್ ಬೆಟ್ಟಿಂಗ್ ಕಂಪನಿಗೆ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ನುಗ್ಗಿ ಧ್ವಂಸ ಮಾಡಿದ್ದಾರೆ. ಅಕ್ರಮ ಆನ್‌ಲೈನ್ ಗೇಮಿಂಗ್ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಪೀಠೋಪಕರಣಗಳನ್ನು ನಾಶಪಡಿಸಲಾಗಿದೆ. ದಾಳಿ ವೇಳೆ ಗ್ರಾಹಕರು ಓಡಿಹೋಗಿದ್ದು, ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು, ಅಕ್ಟೋಬರ್​ 05: ಕನ್ನಡ ಪರ ಸಂಘಟನೆಯಿಂದ ಆನ್​ಲೈನ್ ಗೇಮಿಂಗ್ ಕಂಪನಿ ಧ್ವಂಸ ಮಾಡಿರುವಂತಹ ಘಟನೆ ನಗರದ ಕೋರಮಂಗಲದಲ್ಲಿ ನಡೆದಿದೆ. ಪ್ರತಿ ಭಾನುವಾರ ಅಕ್ರಮವಾಗಿ ಆನ್​ಲೈನ್ ಗೇಮ್ ನಡೆಸ್ತಿದ್ದ ಆರೋಪ ಹಿನ್ನಲೆ ನಮ್ಮ ಕರ್ನಾಟಕ ಸೇನೆಯಿಂದ ಗೋಲ್ಡನ್ ಏಸಸ್ ಪೋಕರ್ ಬೆಟ್ಟಿಂಗ್ ಕಂಪನಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಲಾಗಿದೆ. ಕನ್ನಡ ಪರ ಸಂಘಟನೆ ದಾಳಿ ಮಾಡುತ್ತಿದ್ದಂತೆ ಗ್ರಾಹಕರು ಓಡಿಹೋದರು. ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.