ಡಿಕೆ ಶಿವಕುಮಾರ್ ಲಾಲ್ಬಾಗ್ ನಡಿಗೆ; ಜನರ ಸಮಸ್ಯೆಗೆ ಕಿವಿಕೊಟ್ಟ ಡಿಸಿಎಂ
ಇಂದಿನಿಂದ ಡಿಸಿಎಂ ಬೆಂಗಳೂರು ನಡಿಗೆ ಆರಂಭಿಸಿದ್ದಾರೆ. ಮುಂದಿ ನ 6 ದಿನಗಳವರೆಗೆ 6 ಪಾರ್ಕ್ಗಳಲ್ಲಿ ನಡಿಗೆ ಮುಂದುವರಿಸಿ ಜನಾಭಿಪ್ರಾಯವನ್ನು ಆಲಿಸಲಿದ್ದಾರೆ. ಬೆಳಿಗ್ಗೆ 1 ತಾಸಿನ ನಡಿಗೆಯ ನಂತರ 1 ತಾಸು ನಗರದ ಜನರ ಸಮಸ್ಯೆಗಳನ್ನು ಆಲಿಸುವ ವಿಚಾರ ನಡೆಸಿದ್ದಾರೆ. ಇಂದು ಲಾಲ್ಬಾಗ್ನಲ್ಲಿ ಡಿಕೆಶಿಯೊಂದಿಗೆ ಸಾರ್ವಜನಿಕರು ಬೆಂಗಳೂರಿನಲ್ಲಿ ಹಾಳಾಗಿರುವ ರಸ್ತೆಗಳು, ಕಸದ ಅವ್ಯವಸ್ಥೆ, ಆ್ಯಂಬುಲೆನ್ಸ್, ಟನಲ್ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು.
ಬೆಂಗಳೂರು, ಅಕ್ಟೋಬರ್ 11: ಇಂದಿನಿಂದ ಡಿಸಿಎಂ ಬೆಂಗಳೂರು ನಡಿಗೆ ಆರಂಭಿಸಿದ್ದಾರೆ. ಮುಂದಿ ನ 6 ದಿನಗಳವರೆಗೆ 6 ಪಾರ್ಕ್ಗಳಲ್ಲಿ ನಡಿಗೆ ಮುಂದುವರಿಸಿ ಜನಾಭಿಪ್ರಾಯವನ್ನು ಆಲಿಸಲಿದ್ದಾರೆ. ಬೆಳಿಗ್ಗೆ 1 ತಾಸಿನ ನಡಿಗೆಯ ನಂತರ 1 ತಾಸು ನಗರದ ಜನರ ಸಮಸ್ಯೆಗಳನ್ನು ಆಲಿಸುವ ವಿಚಾರ ನಡೆಸಿದ್ದಾರೆ. ಇಂದು ಲಾಲ್ಬಾಗ್ನಲ್ಲಿ ಡಿಕೆಶಿಯೊಂದಿಗೆ ಸಾರ್ವಜನಿಕರು ಬೆಂಗಳೂರಿನಲ್ಲಿ ಹಾಳಾಗಿರುವ ರಸ್ತೆಗಳು, ಕಸದ ಅವ್ಯವಸ್ಥೆ, ಆ್ಯಂಬುಲೆನ್ಸ್, ಟನಲ್ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ರಾಜ್ಯದಲ್ಲಿ ಕಸದ ಸಮಸ್ಯೆ ಜಾಸ್ತಿಯಾಗಿದ್ದು, ಎಲ್ಲೆಂದರಲ್ಲಿ ಕಸ ಕಾಕುವವರಿಗೆ ದಂಡ ಹಾಕಿ ಎಂದು ಜನರು ಮನವಿ ಮಾಡಿದ್ದಾರೆ. ಲಾಲ್ಬಾಗ್ನಲ್ಲಿ ಹೆಣ್ಣು ಮಕ್ಕಳು ಓಡಾಡುತ್ತಾರೆ . ಹೀಗಾಗಿ ಇಲ್ಲಿ ಸಿಸಿ ಕ್ಯಾಮೆರಾ ಅವಶ್ಯಕತೆಯಿರುವುದರಿಂದ 10 ಕೋಟಿ ರೂ.ಗಳನ್ನು ನಾನ ಉ ಲಾಲ್ಬಾಗ್ ಅಭಿವೃದ್ಧಿಗೆ ನೀಡುತ್ತೇನೆ ಎಂದು ಡಿಸಿಎಂ ಹೇಳಿದ್ದಾರೆ.
Published on: Oct 11, 2025 11:03 AM
