AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮಳೆ ಅಬ್ಬರ: ವಿಧಾನಸೌಧಕ್ಕೂ ನುಗ್ಗಿ ನೀರು; ಆರ್. ಅಶೋಕ್ ಕೊಠಡಿ ಜಲಾವೃತ!

ಬೆಂಗಳೂರು ಮಳೆ ಅಬ್ಬರ: ವಿಧಾನಸೌಧಕ್ಕೂ ನುಗ್ಗಿ ನೀರು; ಆರ್. ಅಶೋಕ್ ಕೊಠಡಿ ಜಲಾವೃತ!

ಅಕ್ಷಯ್​ ಪಲ್ಲಮಜಲು​​
|

Updated on: Apr 29, 2026 | 7:39 PM

Share

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ವಿಧಾನಸೌಧದ ಕಾರಿಡಾರ್‌ಗಳು ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕೊಠಡಿ ಜಲಾವೃತಗೊಂಡಿದೆ. ಕಾರಿಡಾರ್‌ಗಳಲ್ಲಿ ನೀರು ಹೊರಹೋಗಲು ವ್ಯವಸ್ಥೆಯಿಲ್ಲ, ಅಲ್ಲದೆ ಸ್ಫೀಕರ್ ಸೂಚನೆಯಂತೆ ತೆಗೆದಿದ್ದ ಕವರ್‌ನಿಂದ ನೀರು ಒಳನುಗ್ಗಿದೆ. ಇಡೀ ವಿಧಾನಸೌಧದಲ್ಲಿ ನೀರು ನಿಂತು ಕಚೇರಿಗಳು, ದಾಖಲೆಗಳು ಅಪಾಯಕ್ಕೀಡಾಗಿವೆ. ಸರ್ಕಾರದ ಅಸಮರ್ಪಕ ಸಿದ್ಧತೆಗಳ ಬಗ್ಗೆ ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಬೆಂಗಳೂರು, ಏ.29: ರಾಜ್ಯ ರಾಜಧಾನಿಯಲ್ಲಿ ಕಳೆದ ಹಲವಾರು ದಿನಗಳ ಬಿಸಿಲಿನ ತಾಪಮಾನದ ನಂತರ ಭಾರಿ ಮಳೆ ಸುರಿದಿದೆ. ಈ ಧಾರಾಕಾರ ಮಳೆಯ ಪರಿಣಾಮವಾಗಿ ರಾಜ್ಯದ ಪ್ರಮುಖ ಆಡಳಿತ ಕೇಂದ್ರವಾದ ವಿಧಾನಸೌಧ ಜಲಾವೃತಗೊಂಡಿದೆ. ವಿಧಾನಸೌಧದ ಸುತ್ತಮುತ್ತ ಭಾರೀ ಗಾಳಿ ಸಹಿತ ಆಲಿಕಲ್ಲು ಮಳೆ ದಾಖಲಾಗಿದೆ. ಮಳೆಯ ತೀವ್ರತೆಯಿಂದಾಗಿ ವಿಧಾನಸೌಧದ ಮೂರು ಮಹಡಿಗಳ ಕಾರಿಡಾರ್‌ಗಳಲ್ಲಿ ಸಂಪೂರ್ಣವಾಗಿ ನೀರು ನಿಂತಿದೆ. ಈ ಪರಿಸ್ಥಿತಿಯಿಂದಾಗಿ ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ನೌಕರರು ನೀರಿನಲ್ಲೇ ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕೊಠಡಿಯ ಒಳಭಾಗಕ್ಕೂ ನೀರು ನುಗ್ಗಿದೆ. ಕೊಠಡಿಯೊಳಗೆ ನೀರು ನಿಂತು ಒಂದು ಸ್ವಿಮ್ಮಿಂಗ್ ಪೂಲ್ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ, ಕಾರಿಡಾರ್‌ಗಳಲ್ಲಿ ಬಿದ್ದ ನೀರು ಹೊರಹೋಗಲು ಯಾವುದೇ ಸೂಕ್ತ ವ್ಯವಸ್ಥೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇಡೀ ವಿಧಾನಸೌಧದಲ್ಲಿ ನೀರು ನುಗ್ಗಿದ್ದು, ಸರ್ಕಾರದ ಅಸಮರ್ಪಕ ನಿರ್ವಹಣೆ ಮತ್ತು ಪೂರ್ವಸಿದ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಮಳೆಯು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದಿದ್ದರೂ, ನೀರು ಹೊರಹಾಕಲು ಸಿಬ್ಬಂದಿ ಕೊರತೆ ಎದುರಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us