ಇದು ಬೆಂಗಳೂರು ನೋಡಿ! ನಂಜಪ್ಪ ಸರ್ಕಲ್ ಬಳಿ ನಡು ರಸ್ತೆಯಲ್ಲೇ ಹೊಂಡದಲ್ಲಿ ಹೂತ ಪಿಕಪ್ ವಾಹನ
Bengaluru pothole problem; ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚಾಗಿದ್ದು, ಟಿವಿ9 ರಸ್ತೆಗುಂಡಿಗಳ ವಿರುದ್ಧ ಅಭಿಯಾನವನ್ನೂ ನಡೆಸುತ್ತಿದೆ. ಇದೀಗ ನಂಜಪ್ಪ ಸರ್ಕಲ್ ಬಳಿ ನಡು ರಸ್ತೆಯಲ್ಲಿ ಪಿಕಪ್ ವಾಹನದ ಚಕ್ರ ಹೊಂಡದಲ್ಲಿ ಹೂತುಹೋದ ವಿಡಿಯೋ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು, ಸೆಪ್ಟೆಂಬರ್ 6: ಬೆಂಗಳೂರಿನಲ್ಲಿ ರಸ್ತೆ ಅವಾಂತರಕ್ಕೆ ಸವಾರರು ಹೈರಾಣಾಗುತ್ತಿದ್ದಾರೆ. ನಗರದ ನಂಜಪ್ಪ ಸರ್ಕಲ್ ಬಳಿ ನಡುರಸ್ತೆಯಲ್ಲೇ ಪಿಕಪ್ ವಾಹನ ಹೂತು ಹೋಗಿದೆ. ರಸ್ತೆ ಅಗೆದು ಸರಿಯಾಗಿ ಮಣ್ಣು ಮುಚ್ಚದೆ ಹೋಗಿರುವ ಕಾರಣ ಸಮಸ್ಯೆಯಾಗಿದೆ. ಪಿಕಪ್ ವಾಹನ ತೆರವು ಮಾಡಲು ಸಾರ್ವಜನಿಕರು ಹರಸಾಹಸಪಟ್ಟರು. ಸದ್ಯ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
Published on: Sep 06, 2025 09:10 AM