ಬೆಂಗಳೂರು ರಸ್ತೆ ಗುಂಡಿಯನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ, ಸರ್ಕಾರದ ವಿರುದ್ಧ ಜನಾಂದೋಲನಕ್ಕೆ ನಿರ್ಧಾರ
ಬೆಂಗಳೂರಿನ ರಸ್ತೆ ಗುಂಡಿಗಳಿಂದ ಅವಘಡಗಳು ಸಂಭವಿಸುತ್ತಿದ್ದು, ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಸಾರ್ವಜನಿಕರು ಸಹ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುತ್ತಾ ಹಿಡಿ ಶಾಪ ಹಾಕುತ್ತಿದ್ದಾರೆ. ಭಾರಿ ಆಕ್ರೋಶದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ನವೆಂಬರ್ 3ರ ಗಡುವು ನೀಡಿದ್ದರು. ಆದರೆ ಸಿಎಂ ಹಾಗೂ ಡಿಸಿಎಂ ಡೆಡ್‌ಲೈನ್ ಮಾತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅವಮಾನ ಮಾಡಿದೆ. ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಸಿಎಂ, ಡಿಸಿಎಂ ಡೆಡ್ಲೈನ್‌ಗೂ ಬೆಲೆ ನೀಡಿಲ್ಲ. ಇದರ ಬೆನ್ನಲ್ಲೇ ಇದೀಗ ವಿಪಕ್ಷ ಬಿಜೆಪಿ ರಸ್ತೆ ಗುಂಡಿಗಳನ್ನು ಸರಿ ಮಾಡಿ ಸಹಿ ಸಂಗ್ರಹಣಾ ಚಳವಳಿ ಮಾಡಲು ಮುಂದಾಗಿದೆ.
ಬೆಂಗಳೂರು (ನವೆಂಬರ್ 04): ಬೆಂಗಳೂರಿನ ರಸ್ತೆ ಗುಂಡಿಗಳಿಂದ ಅವಘಡಗಳು ಸಂಭವಿಸುತ್ತಿದ್ದು, ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಸಾರ್ವಜನಿಕರು ಸಹ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುತ್ತಾ ಹಿಡಿ ಶಾಪ ಹಾಕುತ್ತಿದ್ದಾರೆ. ಭಾರಿ ಆಕ್ರೋಶದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ನವೆಂಬರ್ 3ರ ಗಡುವು ನೀಡಿದ್ದರು. ಆದರೆ ಸಿಎಂ ಹಾಗೂ ಡಿಸಿಎಂ ಡೆಡ್‌ಲೈನ್ ಮಾತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅವಮಾನ ಮಾಡಿದೆ. ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಸಿಎಂ, ಡಿಸಿಎಂ ಡೆಡ್ಲೈನ್‌ಗೂ ಬೆಲೆ ನೀಡಿಲ್ಲ. ಇದರ ಬೆನ್ನಲ್ಲೇ ಇದೀಗ ವಿಪಕ್ಷ ಬಿಜೆಪಿ ರಸ್ತೆ ಗುಂಡಿಗಳನ್ನು ಸರಿ ಮಾಡಿ ಸಹಿ ಸಂಗ್ರಹಣಾ ಚಳವಳಿ ಮಾಡಲು ಮುಂದಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಎರಡೂವರೆ ವರ್ಷದಲ್ಲಿ ರಸ್ತೆಗಳು ಅಧೋಗತಿಗೆ ಹೋಗಿವೆ. ಕಸ ಪೂರ್ತಿ ಬೆಂಗಳೂರಿನಲ್ಲಿ ಸಂಗ್ರಹ ಆಗಿದೆ. ಅಭಿವೃದ್ಧಿ ಆಗಿಲ್ಲ, ಹಣ ಬಿಡುಗಡೆ ಅಗಿಲ್ಲ. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಇಂದು ಸಭೆ ನಡೆಸಿದ್ದೇವೆ. ಬೆಂಗಳೂರಿನ ಜನತೆಗೆ ದ್ರೋಹ ಬಗೆದ ಕಾಂಗ್ರೆಸ್ ವಿರುದ್ಧ ಜನಾಂದೋಲನ ಮಾಡುತ್ತೇವೆ. ಒಂದು ವಾರಗಳ ಕಾಲ (ನವೆಂಬರ್ 7 ರಿಂದ 15 ರವರೆಗೆ) ರಸ್ತೆ ಗುಂಡಿಗಳನ್ನು ಸರಿ ಮಾಡಿ ಸಹಿ ಸಂಗ್ರಹ ಚಳವಳಿ ಮಾಡುತ್ತೇವೆ ಎಂದು ಹೇಳಿದರು.
