Loading video

ಪಳಗಿದ ರಾಜಕಾರಣಿಯಂತೆ ಮಾತಾಡುವ ಅನುಸೂಯ ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಗೆ ಮಾತಿನೇಟು ಕೊಟ್ಟರು!

|

Updated on: Mar 30, 2024 | 7:03 PM

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಕೈಹಿಡಿಯತ್ತಾರೆ ಅನ್ನೋದನ್ನು ಮನವರಿಕೆ ಮಾಡಿಕೊಂಡೇ ಅಮಿತ್ ಶಾ ತಮ್ಮ ಪತಿಗೆ ಟಿಕೆಟ್ ನೀಡಿದ್ದಾರೆ, ಈ ಬಾರಿ ಕ್ಷೇತ್ರದಲ್ಲಿ ಭಿನ್ನವಾದ ವಾತಾವರಣವಿದೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಹೋರಾಡುತ್ತಿವೆ ಎಂದು ಅನುಸೂಯ ಮಂಜುನಾಥ್ ಹೇಳಿದರು.

ಆನೇಕಲ್: ದೂರದಿಂದ ನೋಡಿದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹೋಲುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ (Dr CN Manjunath) ಅವರ ಪತ್ನಿ ಅನುಸೂಯ ಮಂಜುನಾಥ್ (Anusuya Manjunath) ಪಳಗಿದ ರಾಜಕಾರಣಿಗಳ ಹಾಗೆ ಮಾತಾಡುತ್ತಾರೆ. ಅವರು ರಾಜಕಾರಣಿಗಳ ಕುಟುಂದವರಾಗಿರುವುದರಿಂದ ಅದು ರಕ್ತಗತವಾಗಿ ಬಂದಿರಬೇಕು. ಇಂದು ಆನೇಕಲ್ ನಲ್ಲಿ ಪತಿಯ ಪರವಾಗಿ ಪ್ರಚಾರ ಮಾಡುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅನಸೂಯ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಕೈಹಿಡಿಯತ್ತಾರೆ ಅನ್ನೋದನ್ನು ಮನವರಿಕೆ ಮಾಡಿಕೊಂಡೇ ಅಮಿತ್ ಶಾ ತಮ್ಮ ಪತಿಗೆ ಟಿಕೆಟ್ ನೀಡಿದ್ದಾರೆ, ಈ ಬಾರಿ ಕ್ಷೇತ್ರದಲ್ಲಿ ಭಿನ್ನವಾದ ವಾತಾವರಣವಿದೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಹೋರಾಡುತ್ತಿವೆ, ಬಿಜೆಪಿಯಿಂದ ಅಮಿತ್ ಶಾ ಇದ್ದರೆ ಜೆಡಿಎಸ್ ನಿಂದ ಕುಮಾರಣ್ಣ ಇದ್ದಾರೆ ಮತ್ತು ಇದರೊಂದಿಗೆ ಹಿರಿಯರಾದ ದೇವೇಗೌಡರ ಸಾಧನೆ ಇದೆ ಎಂದು ಅನುಸೂಯ ಹೇಳಿದರು. ಕಳೆದ ಬಾರಿಯ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಜೆಡಿಎಸ್ ಸಹಾಯ ಸಿಕ್ಕಿತ್ತು ಅನ್ನೋದನ್ನು ಕಾಂಗ್ರೆಸ್ ಅಭ್ಯರ್ಥಿ ಮರೆಯಬಾರದು ಎಂದು ಅನುಸೂಯ ಮಂಜುನಾಥ್ ಮಾರ್ಮಿಕವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಡಿಕೆ ಸುರೇಶ್ ಗೆಲುವಿಗೆ ಸಹಾಯ ಮಾಡಿದ್ದೆ: ಸತ್ಯ ಬಾಯಿಬಿಟ್ಟ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್