ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತು: ಲೀಲಾ-ಮಂಜು ಒಂದಾಗಲು ಕಾರಣ ಯಾರು?

Updated on: Dec 10, 2025 | 9:16 PM

ಸೋಷಿಯಲ್ ಮಿಡಿಯಾದಲ್ಲಿ ಭಾರೀ ಸೆನ್ಸೆಷನಲ್ ಸೃಷ್ಟಿಸಿದ್ದ ಸಂತು- ಲೀಲಾ ಮತ್ತು ಮಂಜು ಟ್ರಯಾಂಗಲ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್​​ ಸಿಕ್ಕಿದ್ದು, ಲೀಲಾ ಪ್ರಿಯಕರ ಸಂತುನನ್ನು ತೊರೆದು ಪತಿ ಮಂಜು ಜತೆ ಬಂದು ಸೇರಿದ್ದಾಳೆ. ಇದರೊಂದಿಗೆ ಡ್ರೈವರ್ ಮಂಜು ಮತ್ತು ಲೀಲಾ ಅವರ ವಿವಾದಾತ್ಮಕ ಕೌಟುಂಬಿಕ ಗೊಂದಲ ಸುಖಾಂತ್ಯ ಕಂಡಿದೆ. ಕೋರ್ಟ್ ಮೆಟ್ಟಿಲೇರಿದ ಬಳಿಕ ದಂಪತಿ ಮಕ್ಕಳಿಗಾಗಿ ಮತ್ತೆ ಒಂದಾಗಲು ನಿರ್ಧರಿಸಿದ್ದು, ಪ್ರೇಮಿ ಸಂತು ಕೂಡ ಇದಕ್ಕೆ ಸಮ್ಮತಿ ನೀಡಿದ್ದಾನೆ.

ಬೆಂಗಳೂರು, (ಡಿಸೆಂಬರ್ 10): ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸೆನ್ಸೆಷನಲ್ ಸೃಷ್ಟಿಸಿದ್ದ ಸಂತು- ಲೀಲಾ ಮತ್ತು ಮಂಜು ಟ್ರಯಾಂಗಲ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್​​ ಸಿಕ್ಕಿದ್ದು, ಲೀಲಾ ಪ್ರಿಯಕರ ಸಂತುನನ್ನು ತೊರೆದು ಪತಿ ಮಂಜು ಜತೆ ಬಂದು ಸೇರಿದ್ದಾಳೆ. ಇದರೊಂದಿಗೆ ಡ್ರೈವರ್ ಮಂಜು ಮತ್ತು ಲೀಲಾ ಅವರ ವಿವಾದಾತ್ಮಕ ಕೌಟುಂಬಿಕ ಗೊಂದಲ ಸುಖಾಂತ್ಯ ಕಂಡಿದೆ. ಕೋರ್ಟ್ ಮೆಟ್ಟಿಲೇರಿದ ಬಳಿಕ ದಂಪತಿ ಮಕ್ಕಳಿಗಾಗಿ ಮತ್ತೆ ಒಂದಾಗಲು ನಿರ್ಧರಿಸಿದ್ದು, ಪ್ರೇಮಿ ಸಂತು ಕೂಡ ಇದಕ್ಕೆ ಸಮ್ಮತಿ ನೀಡಿದ್ದಾನೆ.

ಕೆಲ ತಿಂಗಳ ಹಿಂದಷ್ಟೇ ಲೀಲಾ ಪತಿ ಮಂಜುನನ್ನು ಬಿಟ್ಟು ಪ್ರಿಯಕರ ಸಂತು ಜೊತೆ ಹೋಗಿದ್ದಳು. ಬಳಿಕ ಭಾರೀ ಹೈಡ್ರಾಮೇ ನಡೆದಿತ್ತು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಹಲ್​ಚಲ್ ಸೃಷ್ಟಿಸಿತ್ತು. ಸಂತು ಮೇಲೂ ದಾಳಿ ಮಾಡಿ ಮಂಜ ಜೈಲು ಸೇರಿದ್ದ. ಇದೀಗ, ಲೀಲಾ ಮನಸ್ಸು ಬದಲಿಸಿ ಪತಿಯನ್ನ ಸೇರಿದ್ದಾಳೆ. ಇದರೊಂದಿಗೆ ಮಂಜು-ಲೀಲಾಳನ್ನು ಮತ್ತೆ ಒಂದುಗೂಡಿಸುವಲ್ಲಿ ಮಹಿಳಾ ಹೋರಾಟಗಾರ್ತಿ ಸಂಧ್ಯಾ ಯಶಸ್ವಿಯಾಗಿದ್ದಾರೆ.

ಅದೇನೆ ಇರ್ಲಿ ಆಕರ್ಷಣೆಗೆ ಬಿದ್ದು ಛಿದ್ರಛಿದ್ರವಾಗಿದ್ದ ಕುಟುಂಬವೊಂದು ಮತ್ತೆ ಒಂದಾಗಿರೋದು ಎಲ್ಲರು ಖುಷಿಯಾಗುವಂತೆ ಮಾಡಿದೆ.

ಇದನ್ನೂ ನೋಡಿ: ಮಂಜು ಲೀಲಾ ಬಿಗ್ ಫೈಟ್​ಗೆ ಬ್ರೇಕ್: ಕೊನೆಗೂ ಪ್ರಿಯಕರನನ್ನ ಬಿಟ್ಟು ಗಂಡನ ಬಳಿ ಬಂದ ಪತ್ನಿ ಲೀಲಾ