Loading video

ಬೆಂಗಳೂರು ಕಾಲ್ತುಳಿತ ಪ್ರಕರಣ ಒಂದು ಆಕಸ್ಮಿಕ, ಯಾರೂ ರಾಜೀನಾಮೆ ನೀಡಬೇಕಿಲ್ಲ; ರಾಜು ಕಾಗೆ, ಶಾಸಕ

Updated on: Jun 10, 2025 | 1:51 PM

ಸತ್ತವರಲ್ಲಿ ಹೆಚ್ಚಿನವರು ಚಿಕ್ಕ ವಯಸ್ಸಿನವರು, ಮಕ್ಕಳ ಸಾವನ್ನು ಯಾವ ತಂದೆ ತಾಯಿ ತಾನೇ ಸಹಿಸಿಕೊಂಡಾರು? ತನಿಖೆ ನಡೆಯಲಿ ಮತ್ತು ವರದಿ ಸಲ್ಲಿಕೆಯಾಗಲಿ, ಮುಖ್ಯಮಂತ್ರಿಯವರ ರಾಜೀನಾಮೆ ಕೇಳೋದು ಸರಿಯಲ್ಲ. ಪಹಲ್ಗಾಮ್​ನಲ್ಲಿ ಉಗ್ರರ ದಾಳಿ ನಡೆದಾಗ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಏನಾದರೂ ಹೇಳಿತ್ತಾ? ಅಕಸ್ಮಿಕಗಳು ಮತ್ತು ಅಚಾತುರ್ಯಗಳು ನಡೆಯುತ್ತಿರುತ್ತವೆ ಎಂದು ರಾಜು ಕಾಗೆ ಹೇಳಿದರು.

ಬೆಂಗಳೂರು, ಜೂನ್ 10: ಕಳೆದ ವಾರ ನಗರದಲ್ಲಿ ಕಾಲ್ತುಳಿತದ ಘೋರ ಘಟನೆ ನಡೆದು 11 ಜನ ಸಾವನ್ನಪ್ಪಿದ್ದು ಅತ್ಯಂತ ದುಃಖಕರ ಸಂಗತಿ, ಯಾರೂ ಹೀಗಾಗುತ್ತದೆ ಅಂತ ಅಂದುಕೊಂಡಿರಲಿಲ್ಲ, ಜನ ನಿರೀಕ್ಷೆಗಿಂತ ಹೆಚ್ಚು ಸೇರಿದ್ದಕ್ಕೆ ಅನಾಹುತ ಸಂಭವಿಸಿದೆ, ಅನಾಹುತ ನಡೆಯುವ ಬಗ್ಗೆ ಗೊತ್ತಿದ್ದರೆ ಸತ್ಕಾರ ಕೂಟವನ್ನು (felicitation) ಸರ್ಕಾರ ಆಯೋಜಿಸುತ್ತಿರಲಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದರು. ವಿಧಾನ ಸೌಧದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಕಾಗೆ, ಇದೊಂದು ಆಕಸ್ಮಿಕ ಘಟನೆ, ನಮ್ಮ ಯುವಕರಲ್ಲಿ ತಾಳ್ಮೆ ಕಡಿಮೆ, ಆದರೆ ನಡೆದ ದುರಂತಕ್ಕಾಗಿ ಯಾರೂ ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಇಂಥ ಘಟನೆಗಳು ಮರುಕಳಿಸಿದ ಹಾಗೆ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.

ಇದನ್ನೂ ಓದಿ:  ಬೆಂಗಳೂರು ಕಾಲ್ತುಳಿತ: ಎಫ್ಐಆರ್​ನಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ