AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪ್ಪು ಮಾಡಿದ್ರೆ ದಂಡ ಹಾಕಿ, ಕೈ ಮಾಡುವ ಹಕ್ಕಿಲ್ಲ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಟ್ರಾಫಿಕ್ ಪೊಲೀಸರ ದೌರ್ಜನ್ಯ

ತಪ್ಪು ಮಾಡಿದ್ರೆ ದಂಡ ಹಾಕಿ, ಕೈ ಮಾಡುವ ಹಕ್ಕಿಲ್ಲ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಟ್ರಾಫಿಕ್ ಪೊಲೀಸರ ದೌರ್ಜನ್ಯ

ಅಕ್ಷಯ್​ ಪಲ್ಲಮಜಲು​​
|

Updated on: May 01, 2026 | 10:02 AM

Share

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರು ವಾಹನ ತಪಾಸಣೆ ವೇಳೆ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ. ಭಾರತೀಯ ಮೋಟಾರು ವಾಹನ ಕಾಯ್ದೆ 1988 ರ ಪ್ರಕಾರ ಪೊಲೀಸರಿಗೆ ನಾಗರಿಕರ ಮೇಲೆ ದೈಹಿಕ ಹಲ್ಲೆ ಮಾಡುವ ಅಧಿಕಾರವಿಲ್ಲ. ದಾಖಲೆ ಪರಿಶೀಲನೆ, ದಂಡ ವಿಧಿಸುವುದು ಅವರ ಅಧಿಕಾರ ವ್ಯಾಪ್ತಿ. ಆತ್ಮರಕ್ಷಣೆ ಅಥವಾ ಗಂಭೀರ ಅಪರಾಧ ತಡೆಯಲು ಮಾತ್ರ ಬಲಪ್ರಯೋಗಕ್ಕೆ ಅವಕಾಶವಿದೆ. ಅನಗತ್ಯ ಹಲ್ಲೆ ಕಾನೂನುಬಾಹಿರ.

ಬೆಂಗಳೂರು, ಮೇ.1: ವಾಹನ ತಪಾಸಣೆಯ ಸಂದರ್ಭದಲ್ಲಿ ಸಂಚಾರಿ ಪೊಲೀಸರು ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಅಥವಾ ಅನುಚಿತವಾಗಿ ವರ್ತಿಸುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಆದರೆ, ಭಾರತೀಯ ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಕಾನ್‌ಸ್ಟೆಬಲ್‌ಗೆ ನಾಗರಿಕರ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಅಧಿಕಾರವಿಲ್ಲ ಎಂಬುದು ಕಾನೂನುಬದ್ಧ ಸತ್ಯ. ಆದರೆ ಬೆಂಗಳೂರಿನಲ್ಲಿ ಪೊಲೀಸರು ಕಾನೂನು ವಿರೋಧವಾಗಿ ನಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಟೋ ಚಾಲಕನೊಬ್ಬನಿಗೆ ಟ್ರಾಫಿಕ್​​ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಆಟೋ ಚಾಲಕ ಪ್ರಶ್ನೆ ಮಾಡಿದ್ದಕ್ಕೆ ಎಳೆದಾಡಿದ್ದಾರೆ. ಇನ್ನೊಂದು ಕಡೆ ಲಾರಿ ಡ್ರೈವರ್​​​ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದೀಗ ಈ ವಿಡಿಯೋವನ್ನು @KarnatakaPortfolio ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪೊಲೀಸರಿಗೆ ದಾಖಲೆಗಳ ಪರಿಶೀಲನೆಗಾಗಿ ವಾಹನವನ್ನು ನಿಲ್ಲಿಸುವ ಅಧಿಕಾರವಿದೆ. ಚಾಲನಾ ಪರವಾನಗಿ (DL), ಆರ್‌ಸಿ (RC), ವಿಮೆ ಮತ್ತು ಪಿಯುಸಿ (PUC) ದಾಖಲೆಗಳನ್ನು ಕೇಳುವುದು, ನಿಯಮ ಉಲ್ಲಂಘನೆಯಾದಲ್ಲಿ ಚಲನ್ ನೀಡುವುದು ಅಥವಾ ದಂಡ ವಿಧಿಸುವುದು. ಗಂಭೀರ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ವಾಹನವನ್ನು ವಶಕ್ಕೆ ಪಡೆಯುವ ಅಧಿಕಾರ ಪೊಲೀಸರಿಗೆ ಇದೆ. ಯಾವುದೇ ಸಂದರ್ಭದಲ್ಲಿ ಪೊಲೀಸರು ಬಲಪ್ರಯೋಗ ಮಾಡುವುದು ಕೇವಲ ಆತ್ಮರಕ್ಷಣೆಗಾಗಿ ಅಥವಾ ಗಂಭೀರ ಅಪರಾಧವನ್ನು ತಡೆಯಲು ಮಾತ್ರ ಸೀಮಿತವಾಗಿದೆ. ಅನಗತ್ಯ ಹಲ್ಲೆಯು ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಅಪರಾಧವಾಗುತ್ತದೆ ಮತ್ತು ಇದು ಪೊಲೀಸ್ ಸೇವಾ ನಿಯಮಗಳ ಉಲ್ಲಂಘನೆಯೂ ಹೌದು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us